* ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇತ್ತೀಚೆಗೆ ಐದನೇ ಲೀಡ್ (ವಿವಿಧ ರಾಜ್ಯಗಳ ಲಾಜಿಸ್ಟಿಕ್ಸ್) -2023 ರ ವರದಿಯನ್ನು ಬಿಡುಗಡೆ ಮಾಡಿದೆ. * ಈ ವರದಿಯು ಭಾರತದದಲ್ಲಿನ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆಯ ಮೇಲೆ ಬೆಳಕು ಚೆಲ್ಲುತ್ತದೆ. * ಲಾಜಿಸ್ಟಿಕ್ಸ್ ಇಂಡೆಕ್ಸ್‌ ಚಾರ್ಟ್‌ನಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಚಂಡೀಗಢ ಹಾಗೂ ಗುಜರಾತ್ ರಾಜ್ಯಗಳು ಮುಂದಿವೆ. ಸಿಕ್ಕಿಂ ಮತ್ತು ತ್ರಿಪುರಾ ರಾಜ್ಯಗಳಿಗೆ ರೈಸಿಂಗ್ ಸ್ಟಾರ್ಸ್ ಸ್ಥಾನ ಸಿಕ್ಕಿದೆ.* ಲಾಜಿಸ್ಟಿಕ್ಸ್ ವಲಯದಲ್ಲಿ ದಿಲ್ಲಿ, ಅಸ್ಸಾಂ, ಹರಿಯಾಣ, ಪಂಜಾಬ್, ತೆಲಂಗಾಣ ಹಾಗೂ ಉತ್ತರಪ್ರದೇಶಗಳು ತಮ್ಮ ಸಾಧಕ ಸ್ಥಾನಮಾನವನ್ನು ಉಳಿಸಿಕೊಂಡಿವೆ. ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಅರುಣಾ ಚಲಪ್ರದೇಶ, ನಾಗಾಲ್ಯಾಂಡ್, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಅತಿವೇಗವಾಗಿ ಈ ವಲಯದಲ್ಲಿ ಪ್ರಗತಿ ಸಾಧಿಸುತ್ತಿವೆ.* 2047ರ ವೇಳೆಗೆ ಭಾರತೀಯ ಆರ್ಥಿಕತೆಯನ್ನು 35 ಟ್ರಿಲಿಯನ್ ಡಾಲರ್‌ಗೆ ಏರಿಸುವಲ್ಲಿ ಲಾಜಿಸ್ಟಿಕ್ಸ್ ವಲಯ ಪ್ರಮುಖ ಪಾತ್ರವಹಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ತಿಳಿಸಿದ್ದಾರೆ.