* ಕೇಂದ್ರ “ಅರಣ್ಯ, ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಮಾಹಿತಿಯ ಪ್ರಕಾರ ಕರ್ನಾಟಕದ ವಿಜಯನಗರ” ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಗದಗ ಜಿಲೆಯ ಮಾಗಡಿ ಕೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿಮುಖಜ ಪ್ರದೇಶ (ಅಳಿವೆ) ಸೇರಿದಂತೆ ದೇಶದ ಐದು ಜೌಗು ಪ್ರದೇಶಗಳು 'ರಾಮ್‌ಸರ್' ಪಟ್ಟಿಗೆ ಸೇರ್ಪಡೆಯಾಗಿವೆ.* ಜೌಗುಪ್ರದೇಶಗಳನ್ನು ಉಳಿಸಲು 1971 ಫೆಬ್ರುವರಿ 2ರಂದು ಇರಾನ್‌ನ ಕ್ಯಾಸ್ಪಿಯನ್ ಸಮುದ್ರತೀರದ 'ರಾಮ್‌ಸರ್‌'ನಲ್ಲಿ ಪ್ರಥಮ ಬಾರಿಗೆ ಒಪ್ಪಂದ ಏರ್ಪಟ್ಟಿತ್ತು. ಆ ಒಪ್ಪಂದದ ಬಳಿಕ, ನೈಸರ್ಗಿಕವಾಗಿ ರೂಪುಗೊಂಡ ಪ್ರದೇಶಗಳಿಗೆ ಅಂತರ ರಾಷ್ಟ್ರೀಯ ಮಾನ್ಯತೆ ನೀಡಲಾಗುತ್ತಿದ್ದು, ಅಂತಹ ಪ್ರದೇಶಗಳನ್ನು 'ರಾಮ್‌ಸರ್ ತಾಣ'ಗಳೆಂದು ಗುರುತಿಸಲಾಗುತ್ತದೆ.* ರಾಜ್ಯದ ಮೂರೂ ಜೌಗು ಪ್ರದೇಶ ಗಳನ್ನು 'ರಾಮ್‌ಸರ್ ಪಟ್ಟಿ'ಗೆ ಸೇರಿಸ ಬೇಕು ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಕಳೆದ ವರ್ಷ ಶಿಫಾರಸು ಮಾಡಿತ್ತು. ಈಗ ಮಾನ್ಯತೆ ಸಿಕ್ಕಿದೆ. * ದೇಶದಲ್ಲಿನ ''ರಾಮ್‌ಸರ್ ತಾಣ' ಗಳು 80 ಕ್ಕೆ ಏರಿದೆ. ರಂಗನತಿಟ್ಟು ಪಕ್ಷಿಧಾಮವನ್ನು 2022ರ ಆಗಸ್ಟ್‌ನಲ್ಲಿ ಈ ಪಟ್ಟಿಗೆ ಸೇರಿಸಲಾಗಿದೆ. *  ವಿಜಯನಗರ” ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಶತಮಾನದ ಹಿನ್ನೆಲೆ ಇದೆ. ಅಂಕಸಮುದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಈ ತಾಣವು 244 ಎಕರೆ ಪ್ರದೇಶದಲ್ಲಿ 24. 30 210 ಜಾತಿಯ ಸಸ್ಯಗಳು, 8 ಜಾತಿಯ ಸಸ್ತನಿಗಳು, 25 ಜಾತಿಯ ಸರೀಸೃಪಗಳು, 240 ಜಾತಿಯ ಪಕ್ಷಿಗಳು, 41 ಜಾತಿಯ ಮೀನುಗಳು, 3 ಜಾತಿಯ ಕಪ್ಪೆಗಳು, 27 ಜಾತಿಯ ಚಿಟ್ಟೆಗಳು ಇವೆ.* ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿಮುಖಜ ಪ್ರದೇಶ (ಅಳಿವೆ) 4,801 ಹೇಕ್ಟರ್ PRADES  ದಲ್ಲಿ ರೂಪುಗೊಂಡಿದೆ. * ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶವು 50 ಹೆಕ್ಟೇರ್‌ನಲ್ಲಿ ಹರಡಿದೆ. ಇದು 166 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಚಳಿಗಾಲದಲ್ಲಿ ಇಲ್ಲಿಗೆ 8 ಸಾವಿರ ಪಕ್ಷಿಗಳು ಬರುತ್ತವೆ.