* ಭಾರತ ಮತ್ತು ಡೆನ್ಮಾರ್ಕ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಮ್ಮ ದೀರ್ಘಕಾಲದ ಸಹಕಾರವನ್ನು ಬಲಪಡಿಸಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.* ಈ ಒಪ್ಪಂದಕ್ಕೆ ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಅಗರ್ವಾಲ್ ಹಾಗೂ ಭಾರತದಲ್ಲಿನ ಡೆನ್ಮಾರ್ಕ್ ರಾಯಭಾರಿ ರಾಸ್ಮಸ್ ಅಬಿಲ್ಡ್ ಗಾರ್ಡ್ ಕ್ರಿಸ್ಪೆನ್ಸನ್ ಸಹಿ ಹಾಕಿದ್ದಾರೆ.* ಈ ನೂತನ ಒಪ್ಪಂದವು 2070ರೊಳಗೆ ಶೂನ್ಯ ಇಂಗಾಲ ಉತ್ಸವದ ಭಾರತದ ಗುರಿ ಸಾಧನೆಗೆ ಸಹಕಾರಿಯಾಗಲಿದೆ. ಇದಲ್ಲದೆ, ನವೀಕರಿಸಬಹುದಾದ ಇಂಧನದ ಏಕೀಕರಣ ಹಾಗೂ ವಿದ್ಯುತ್ ವಾಹನ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಯೋಗವನ್ನು ಉತ್ತೇಜಿಸುತ್ತದೆ.* ಸುಸ್ಥಿರ ಇಂಧನ ವಲಯದಲ್ಲಿ ಮುನ್ನಡೆ ಸಾಧಿಸಲು ಉಭಯ ರಾಷ್ಟ್ರಗಳ ಗುರಿ ಒಂದೇ ಆಗಿರುವುದರಿಂದ ಈ ಒಪ್ಪಂದ ಪ್ರಮುಖವಾಗಿರುತ್ತದೆ.* ಒಪ್ಪಂದದ ಭಾಗವಾಗಿ, ಎರಡೂ ದೇಶಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಉತ್ತೇಜಿಸುವ ಜೊತೆಗೆ ಇಂಗಾಲದ ಉತ್ಸರ್ಜನೆ ಕುರಿತಂತೆ ತಜ್ಞರ ಮಾತುಕತೆ ಮತ್ತು ಜಂಟಿ ತರಬೇತಿಗಳನ್ನು ಆಯೋಜಿಸಲಿವೆ.* ಈ ಒಪ್ಪಂದವು ಭಾರತದ ಶುದ್ಧ ಇಂಧನ ಪರಿವರ್ತನೆಗೆ ಗತಿಯನ್ನೂ ನೀಡುತ್ತದೆ ಮತ್ತು ಪ್ಯಾರಿಸ್ ಒಪ್ಪಂದದಡಿ ಕೈಗೊಳ್ಳಲಾಗುವ ಹವಾಮಾನ ಬದಲಾವಣೆಯ ವಿರುದ್ಧದ ಕ್ರಮಗಳಿಗೆ ಸಹಕಾರಿಯಾಗುತ್ತದೆ.* ವಿದ್ಯುತ್ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಸಹಕಾರವು ಸುಸ್ಥಿರ ಅಭಿವೃದ್ಧಿಯ ಪರವಾಗಿ ಉಭಯ ರಾಷ್ಟ್ರಗಳ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ.