* ಗಾಲ್ವಾನ್ ಸಂಘರ್ಷದ ಬಳಿಕ ಭಾರತ-ಚೀನಾ ಸಂಬಂಧ ಸುಧಾರಣೆಗೆ ಚರ್ಚೆ ನಡೆದಿದ್ದು, ಸಮಸ್ಯೆ ಬಗೆಹರಿಸಿಕೊಳ್ಳಲು ಎರಡು ದೇಶಗಳ ಮಧ್ಯೆ ಒಮ್ಮತ ಏರ್ಪಟ್ಟಿದೆ.* ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಅವರ ಚೀನಾ ಭೇಟಿ ಅಂತ್ಯಗೊಂಡಿದ್ದು, ಮಾತುಕತೆ ಬಗ್ಗೆ ಚೀನಾ ಮಂಗಳವಾರ(ಜ.28) ಹೇಳಿಕೆ ಬಿಡುಗಡೆ ಮಾಡಿದೆ. ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಸಂಬಂಧಿಸಿದಂತೆ ಚೀನಾ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.* ಚೀನಾ ಭಾರತದ ಮೂಲಭೂತ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟು ದೀರ್ಘಕಾಲಿಕ ದ್ವಿಪಕ್ಷೀಯ ಸಂಬಂಧ ರೂಪಿಸಬೇಕೆಂದು ತಿಳಿಸಿದೆ. ಮಾತುಕತೆ ನೇರವಾಗಿ, ರಚನಾತ್ಮಕವಾಗಿ ನಡೆಯಬೇಕು ಮತ್ತು ಜನಮತವನ್ನು ಸಕಾರಾತ್ಮಕವಾಗಿ ರೂಪಿಸಬೇಕು ಎಂದು ಅಭಿಪ್ರಾಯಪಟ್ಟಿದೆ.* ಚೀನಾ ಪ್ರಕಾರ, ಭಾರತ ಶಾಂಘೈ ಸಹಕಾರ ಸಂಸ್ಥೆ (SCO) ಯಲ್ಲಿ ಸಂಪೂರ್ಣ ನಾಯಕತ್ವವನ್ನು ಬೆಂಬಲಿಸಿದ್ದು, ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಒಪ್ಪಿಕೊಂಡಿದೆ.* ದ್ವಿಪಕ್ಷೀಯ ಸಂಬಂಧಗಳ 75ನೇ ವರ್ಷದಲ್ಲಿ, ಮಾಧ್ಯಮ ಮತ್ತು ಚಿಂತಕರ ಛಾವಡಿ ಸೇರಿ ಸಾಂಸ್ಕೃತಿಕ ವಿನಿಮಯಕ್ಕೆ ಒಪ್ಪಿಗೆ, ನಿಯಮಿತ ಮಾತುಕತೆ ನಡೆಸಲು ಸಹಮತ.* ನೇರ ವಿಮಾನಯಾನ ಆರಂಭ ಮಾನಸ ಸರೋವರ ಯಾತ್ರೆ ಪುನರಾರಂಭ ಸೇರಿ ಎರಡೂ ದೇಶಗಳಲ್ಲಿ ಆಯಾ ದೇಶಗಳ ವಿವಿಧ ಮಾಧ್ಯಮ ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ.* ಎರಡೂ ದೇಶಗಳು ಜಲ ಸಹಕಾರ ಮತ್ತು ಜಲಸಂಪತ್ತಿ ಮಾಹಿತಿಯ ವಿನಿಮಯಕ್ಕೆ ಸಮ್ಮತಿಸಿವೆ; ತಜ್ಞರ ತಂಡ ಶೀಘ್ರ ಮಾತುಕತೆ ನಡೆಸಲಿದೆ.