* ಭಾರತ ಮತ್ತು ಚೀನಾ ನಡುವೆ ಗಡಿಭಾಗ ಸಂಬಂಧಿತ ವಿವಾದಗಳನ್ನು ವ್ಯವಸ್ಥಿತ ಯೋಜನೆಯ ಮೂಲಕ ಬಗೆಹರಿಸಲು ಇಬ್ಬರೂ ದೇಶಗಳು ಮುಂದಾಗಬೇಕೆಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ರಕ್ಷಣಾ ಸಚಿವ ಡಾಂಗ್ ಜುನ್ ಅವರಿಗೆ ಪ್ರಸ್ತಾಪಿಸಿದ್ದಾರೆ.* ಚೀನಾದ ಚಿಂಗ್ಡಾವ್ನಲ್ಲಿ ನಡೆದ ಎಸ್ಸಿಒ ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರ ದ್ವಿಪಕ್ಷೀಯ ಮಾತುಕತೆ ನಡೆದಿದೆ.* ಎಲ್ಎಸಿ ಭಾಗದಲ್ಲಿ ಶಾಂತಿ ಕಾಪಾಡುವ ಅಗತ್ಯತೆ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಮಾತುಕತೆ ರಚನಾತ್ಮಕವಾಗಿತ್ತು ಎಂದು ರಾಜನಾಥ್ ತಿಳಿಸಿದ್ದಾರೆ.* ಭಾನುವಿಷ್ಯ ದೃಷ್ಟಿಯಿಂದ ಸಂಬಂಧ ಸುಧಾರಣೆಯ ಕುರಿತು ಅಭಿಪ್ರಾಯ ವಿನಿಮಯವಾಗಿದ್ದು, ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭವಾದ ಬಗ್ಗೆ ಸಂತಸ ವ್ಯಕ್ತಪಡಿಸಲಾಗಿದೆ.* ಗಡಿಭಾಗ ಉದ್ವಿಗ್ನತೆ ಕಡಿಮೆ ಮಾಡಲು, ಗಡಿ ಗುರುತು ಹಿಡಿಯಲು ಕಾರ್ಯವಿಧಾನಗಳನ್ನು ಮರುಸ್ಥಾಪಿಸುವ ಅಗತ್ಯವನ್ನು ಭಾರತ ಒತ್ತಿಹೇಳಿದೆ. ಭಾರತ ಸಂಘರ್ಷ ಬಯಸದೆ, ಮಾತುಕತೆ ಮತ್ತು ಸಂವಹನದ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಲು ಸಿದ್ಧವಾಗಿದೆ ಎಂದು ಇಬ್ಬರು ಸಚಿವರು ಹೇಳಿದ್ದಾರೆ.