ಭಾರತ ಮತ್ತು ಬ್ರಿಟನ್ ಮುಕ್ತ ಮಾರುಕಟ್ಟೆ (FTA) ಒಪ್ಪಂದ ಕುರಿತ ಮಾತುಕತೆ ಪುನರಾರಂಭ ಮಾಡುವುದಾಗಿ ಘೋಷಿಸಿದ್ದು, ಈ ಕುರಿತು ಬ್ರಿಟನ್ನ ವ್ಯವಹಾರ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಮತ್ತು ಭಾರತದ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಜಂಟಿ ಹೇಳಿಕೆ ನೀಡಿದರು.🔹 ₹20 ಶತಕೋಟಿ ದ್ವಿಪಕ್ಷೀಯ ವ್ಯಾಪಾರದ ಬೆಳವಣಿಗೆಮುಂದಿನ 10 ವರ್ಷಗಳಲ್ಲಿ ಭಾರತ-ಬ್ರಿಟನ್ ದ್ವಿಪಕ್ಷೀಯ ವ್ಯಾಪಾರ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ.ವಲಸೆ ಈ ಒಪ್ಪಂದದ ಭಾಗವಲ್ಲ ಹಾಗೂ ಭಾರತ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ವಲಸೆಯ ಪ್ರಸ್ತಾಪವನ್ನು ಮುಂದೆಯೂ ಮುಂದುವರಿಸುವುದಿಲ್ಲ ಎಂದು ಪೀಯೂಷ್ ಗೋಯಲ್ ಸ್ಪಷ್ಟಪಡಿಸಿದರು.🔹 ಬ್ರಿಟನ್ ಸರ್ಕಾರದ ಪ್ರಮುಖ ಆದ್ಯತೆಬ್ರಿಟನ್ ವಾಣಿಜ್ಯ ಸಚಿವ ಜೊನಾಥನ್ ರೆನಾಲ್ಡ್ಸ್ ಪ್ರಕಾರ, ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (FTA) ವೇಗವಾಗಿ ಮುಂದುವರಿಯುವುದು ಬ್ರಿಟನ್ ಸರ್ಕಾರದ ಪ್ರಮುಖ ಗುರಿ.ಸಾರ್ವತ್ರಿಕ ಚುನಾವಣಾ ವಿಳಂಬದ ಬಳಿಕ ಮಾತುಕತೆ ಪುನರಾರಂಭಗೊಂಡಿದ್ದು, ಇದೀಗ ವೇಗವಾಗಿ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.🔹 ಭಾರತದಲ್ಲಿ ಬ್ರಿಟನ್ ಹೂಡಿಕೆ ಸಚಿವರ ಭೇಟಿಬ್ರಿಟನ್ ಹೂಡಿಕೆ ಸಚಿವ ಪೋಪಿ ಗಸ್ಟಫ್ಸನ್ ಮುಂಬೈ ಮತ್ತು ಬೆಂಗಳೂರಿನಲ್ಲಿ ಹೂಡಿಕೆದಾರರೊಂದಿಗೆ ಚರ್ಚೆ ನಡೆಸಲಿದ್ದಾರೆ.ಈ ಭೇಟಿಯಿಂದ ಭಾರತ-ಬ್ರಿಟನ್ ವ್ಯಾಪಾರದ ಬೆಳವಣಿಗೆಯಲ್ಲಿ ಹೊಸ ತಿರುವು ನಿರೀಕ್ಷಿಸಲಾಗಿದೆ.ಈ ಮಹತ್ವದ ಚರ್ಚೆಗಳ ಮೂಲಕ ಭಾರತ-ಬ್ರಿಟನ್ ವಾಣಿಜ್ಯ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.ಭಾರತ-ಯುಕೆ FTA ಮಾತುಕತೆ ಸಂಕ್ಷಿಪ್ತ ವಿವರ :ಭಾರತ ಮತ್ತು ಯುಕೆ ವ್ಯಾಪಾರ ಒಪ್ಪಂದದ (FTA) ಮಾತುಕತೆಗಳನ್ನು ಪುನರಾರಂಭಿಸಿದ್ದು, ಎರಡೂ ದೇಶಗಳು ಪರಸ್ಪರ ಸುಂಕಗಳನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶ ಹೊಂದಿವೆ. ಭಾರತದ ಬೇಡಿಕೆಗಳು:- ಐಟಿ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿಗಾಗಿ ಹೆಚ್ಚು ಪ್ರವೇಶ.- ಕೆಲವು ಸರಕುಗಳಿಗೆ ಕಸ್ಟಮ್ಸ್ ಸುಂಕವಿಲ್ಲದ ಮಾರುಕಟ್ಟೆ ಪ್ರವೇಶ. ಯುಕೆನ ಬೇಡಿಕೆಗಳು - ಸ್ಕಾಚ್ ವಿಸ್ಕಿ, ಎಲೆಕ್ಟ್ರಿಕ್ ವಾಹನಗಳು, ಕುರಿ ಮಾಂಸ, ಚಾಕೊಲೇಟ್ ಮತ್ತು ಮಿಠಾಯಿಗಳ ಆಮದು ಸುಂಕದಲ್ಲಿ ಕಡಿತ. - ದೂರಸಂಪರ್ಕ, ಬ್ಯಾಂಕಿಂಗ್, ಕಾನೂನು ಮತ್ತು ಹಣಕಾಸು ಸೇವೆಗಳಲ್ಲಿ ಹೆಚ್ಚು ಅವಕಾಶ.ಗೋಯಲ್ ಅವರ ಹೇಳಿಕೆ: - ಸುಂಕಗಳ ಕಡಿತವು ವ್ಯವಹಾರಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುತ್ತದೆ. - ಉತ್ತಮ ಮತ್ತು ದೀರ್ಘಕಾಲಿಕ ಒಪ್ಪಂದಕ್ಕಾಗಿ ತ್ವರಿತ ನಿರ್ಧಾರಗಳ ಅಗತ್ಯವಿದೆ, ಆದರೆ ಆತುರ ಬೇಡ. ವಲಸೆ ವಿಚಾರ: ವಲಸೆ ಮಾತುಕತೆಗಳ ಭಾಗವಲ್ಲ. ಆದರೆ ವ್ಯಾಪಾರದ ಚಲನಶೀಲತೆಗಾಗಿ ವೀಸಾ ವ್ಯವಸ್ಥೆ ಹೆಚ್ಚು ಸುಧಾರಿತವಾಗಬೇಕೆಂದು ಅಭಿಪ್ರಾಯ. ಅತ್ಯುತ್ತಮ ಭವಿಷ್ಯ ನಿರೀಕ್ಷೆ: ಪ್ರಸ್ತುತ USD 20 ಬಿಲಿಯನ್ ದ್ವಿಪಕ್ಷೀಯ ವ್ಯಾಪಾರವನ್ನು ಮುಂದಿನ 10 ವರ್ಷಗಳಲ್ಲಿ ಎರಡು ಅಥವಾ ಮೂರು ಪಟ್ಟು ಹೆಚ್ಚಿಸುವ ಉದ್ದೇಶ. ಪ್ರಸ್ತುತ ಸ್ಥಿತಿ: - ಯುಕೆ ಲೇಬರ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾತುಕತೆಗಳು ನಡೆಯುತ್ತಿವೆ. - ಭಾರತ-ಯುಕೆ ವ್ಯಾಪಾರವು 2023-24ರಲ್ಲಿ USD 21.34 ಶತಕೋಟಿಗೆ ಏರಿಕೆಯಾಗಿದೆ. ಇದು ಎರಡೂ ದೇಶಗಳ ಆರ್ಥಿಕತೆಯನ್ನು ಹೆಚ್ಚಿಸುವ ಪ್ರಮುಖ ಬೆಳವಣಿಗೆಯಾಗಿದೆ.