* 2022ರ ಜನವರಿಯಿಂದ ಆರಂಭವಾದ ಮಾತುಕತೆ ಮೇ 6, 2025ರಂದು ಯಶಸ್ವಿಯಾಯಿತು. ಇದು ಐರೋಪ್ಯ ಒಕ್ಕೂಟದಿಂದ ಹೊರಬಂದ ನಂತರದ ಬ್ರಿಟನ್ನ ಅತಿದೊಡ್ಡ ಒಪ್ಪಂದವಾಗಿದೆ.* ಭಾರತ–ಬ್ರಿಟನ್ ನಡುವಿನ ₹5 ಲಕ್ಷ ಕೋಟಿಯ ವ್ಯಾಪಾರವನ್ನು 2030ರ ಹೊತ್ತಿಗೆ ದ್ವಿಗುಣಗೊಳಿಸುವ ಉದ್ದೇಶವಿದೆ.* ಭಾರತ ಬ್ರಿಟನ್ಗೆ ರಫ್ತು ಮಾಡುವ ಶೇ 99% ಸರಕುಗಳಿಗೆ ಶೂನ್ಯ ಸುಂಕದ ಅವಕಾಶ ಸಿಕ್ಕಿದೆ. ಬಟ್ಟೆ, ಚರ್ಮ, ಆಭರಣ, ಯಾಂತ್ರಿಕ ವಸ್ತುಗಳು, ರಾಸಾಯನಿಕಗಳು ಸೇರಿದಂತೆ ಹಲವು ಉತ್ಪನ್ನಗಳಿಗೆ ಲಾಭ. ಬ್ರಿಟನ್ನ ಶೇ 85% ಉತ್ಪನ್ನಗಳು ಒಂದೇ ದಶಕದಲ್ಲಿ ಭಾರತ ಪ್ರವೇಶಿಸಲು ಸುಂಕಮುಕ್ತವಾಗಲಿವೆ.* ಸೇಬು, ಹಾಲು ಉತ್ಪನ್ನಗಳು, ಪ್ಲಾಸ್ಟಿಕ್, ವಜ್ರ, ಸ್ಮಾರ್ಟ್ಫೋನ್ ಮುಂತಾದವು ಒಪ್ಪಂದದ ವ್ಯಾಪ್ತಿಗೆ ಬಾರದ ಸರಕುಗಳಾಗಿವೆ. ಪೆಟ್ರೋಲಿಯಂ, ಸೆರಾಮಿಕ್, ರಾಸಾಯನಿಕಗಳಂತಹ ಕೆಲವು ಉತ್ಪನ್ನಗಳಿಗೆ ಸುಂಕವನ್ನು ನಿಧಾನವಾಗಿ ಕಡಿತಗೊಳಿಸಲಾಗುತ್ತದೆ.* ಸ್ಕಾಚ್ ವಿಸ್ಕಿಯ ಸುಂಕ ಶೇ 150ರಿಂದ ಶೇ 40ಕ್ಕೆ 10 ವರ್ಷಗಳಲ್ಲಿ ಇಳಿಯಲಿದೆ. ಐಷಾರಾಮಿ ಕಾರುಗಳ ಸುಂಕ ಶೇ 100ರಿಂದ ಶೇ 10ಕ್ಕೆ ಇಳಿಯಲಿದೆ, ಆದರೆ ಅದು ಹಂತ ಹಂತವಾಗಿ, 10-15 ವರ್ಷಗಳಲ್ಲಿ ನಡೆಯಲಿದೆ.* ಯೋಗ ಶಿಕ್ಷಕರು, ಪಾಕತಜ್ಞರು, ಸಂಗೀತಗಾರರು ಸೇರಿದಂತೆ 1,800 ಗುತ್ತಿಗೆದಾರರಿಗೆ ಬ್ರಿಟನ್ ಪ್ರವೇಶ ಸಾಧ್ಯವಾಗಲಿದೆ. ಉದ್ಯೋಗ, ಹೂಡಿಕೆ ಉದ್ದೇಶಗಳಿಗಾಗಿ ಭೇಟಿ ನೀಡುವವರಿಗೆ ವೀಸಾ ಸೌಲಭ್ಯ ವಿಸ್ತರಿಸಲಾಗುತ್ತದೆ.* ₹200 ಕೋಟಿ ಮೌಲ್ಯದ ಟೆಂಡರ್ಗಳಿಗೆ ಬ್ರಿಟನ್ ಪೂರೈಕೆದಾರರಿಗೆ ಅವಕಾಶ. ಆದರೆ, ಇದು ಕೇಂದ್ರದ ಸಂಸ್ಥೆಗಳಿಗೆ ಮಾತ್ರ ಸೀಮಿತ.* ಕಾನೂನು ಪ್ರಕ್ರಿಯೆಗೆ ಮೂರು ತಿಂಗಳು ಬೇಕು. ನಂತರ ಎರಡು ದೇಶಗಳ ಸಂಸತ್ತುಗಳಲ್ಲಿ ಅಂಗೀಕಾರಕ್ಕೆ ಒಂದು ವರ್ಷ ಹಿಡಿಯಬಹುದು.* ಭಾರತ ಈಗಾಗಲೇ 14 ಎಫ್ಟಿಎಗಳಿಗೆ ಸಹಿ ಹಾಕಿದ್ದು, ಶ್ರೀಲಂಕಾ, ಜಪಾನ್, ಆಸ್ಟ್ರೇಲಿಯಾ, ಯುಎಇ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಮಾತುಕತೆ ಮುಂದುವರಿಸಿದೆ.