* ಭಾರತ ಮತ್ತು ಬ್ರಿಟನ್ ಗುರುವಾರ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ (FTA)ಕ್ಕೆ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟಿಶ್ ಪ್ರಧಾನಿ ಕೀತ್ ಸ್ಟಾರ್ಮರ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ.* 2030ರೊಳಗೆ ಉಭಯ ದೇಶಗಳು ತಮ್ಮ ವ್ಯಾಪಾರವನ್ನು 120 ಬಿಲಿಯನ್ ಡಾಲರ್ಗೂ ಹೆಚ್ಚಿಸುವ ಗುರಿಯನ್ನು ಹೊಂದಿವೆ.* ಈ ಒಪ್ಪಂದವು ಮೂರು ವರ್ಷಗಳ ಮಾತುಕತೆ ನಂತರ ರೂಪುಗೊಂಡಿದ್ದು, ಅಭಿವೃದ್ಧಿಪಡಿದ ದೇಶದೊಂದಿಗೆ ಭಾರತ ಸಹಿ ಹಾಕಿದ ಪ್ರಥಮ ವ್ಯಾಪಾರ ಒಪ್ಪಂದವಾಗಿದೆ. ಇದು ಭಾರತ ಮತ್ತು ಬ್ರಿಟನ್ ನಡುವಿನ ಆಮದು-ರಫ್ತು ಸುಂಕಗಳನ್ನು ಕಡಿಮೆ ಮಾಡಲಿದೆ.* ಒಪ್ಪಂದ ಜಾರಿಗೆ ಬರಲು ಬ್ರಿಟನ್ ಸಂಸತ್ ಮತ್ತು ಭಾರತದ ಕೇಂದ್ರ ಸಂಪುಟದ ಅನುಮೋದನೆ ಅಗತ್ಯವಿದೆ.* ಜವಳಿ, ಚರ್ಮ, ಆಟಿಕೆ, ಸಾಗರ ಉತ್ಪನ್ನಗಳು, ಎಂಜಿನಿಯರಿಂಗ್, ಆಟೋ ಭಾಗಗಳು, ಸಾವಯವ ರಾಸಾಯನಿಕಗಳು ಸೇರಿದಂತೆ ಹಲವು ವಲಯಗಳಿಗೆ ಈ ಒಪ್ಪಂದವು ಉತ್ತೇಜನ ನೀಡಲಿದೆ.* ಬ್ರಿಟನ್ನ ವೈದ್ಯಕೀಯ ಉಪಕರಣಗಳು ಹಾಗೂ ಬಾಹ್ಯಾಕಾಶ ಉತ್ಪನ್ನಗಳು ಭಾರತದಲ್ಲಿ ಕಡಿಮೆ ದರದಲ್ಲಿ ಲಭ್ಯವಾಗಲಿವೆ.* ಬ್ರಿಟನ್ಗೆ ರಿಯಾಯಿತಿಗಳಂತೆ, ಸ್ಕಾಚ್ ವಿಸ್ಕಿ ಮತ್ತು ಜಿನ್ಗಳ ಸುಂಕ ಶೇ.150ರಿಂದ ಶೇ.75ಕ್ಕೆ ಇಳಿಸಲಾಗಿದೆ. ಬ್ರಿಟನ್ ಕಾರುಗಳ ಸುಂಕ ಶೇ.100ರಿಂದ ಶೇ.10ಕ್ಕೆ ಇಳಿಯಲಿದೆ. ಕಾಸ್ಮೆಟಿಕ್ಸ್, ಚಾಕೋಲೆಟ್, ಮೀನಿನ ಮೇಲಿನ ಸುಂಕವೂ ಕಡಿಮೆಯಾಗಲಿದೆ.* ಭಾರತಕ್ಕೆ ಬ್ರಿಟನ್ ನೀಡಿದ ರಿಯಾಯಿತಿಗಳಂತೆ ಶೇ.99ರಷ್ಟು ಭಾರತೀಯ ಉತ್ಪನ್ನಗಳಿಗೆ ಸುಂಕರಹಿತ ಪ್ರವೇಶ ಸಿಗಲಿದೆ.* ಅಲ್ಪಾವಧಿಯ ವೀಸಾ ಸೌಲಭ್ಯದಿಂದ ಯೋಗ ಶಿಕ್ಷಕರು, ಕಲಾವಿದರು, ಬಾಣಸಿಗರಿಗೆ ಲಾಭವಾಗಲಿದೆ. ಹೂಡಿಕೆ ಹರಿವು ಕೂಡ ಉಭಯ ದೇಶಗಳ ನಡುವೆ ಹೆಚ್ಚುವ ಸಾಧ್ಯತೆ ಇದೆ.