* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಏಷ್ಯಾ ಪ್ರವಾಸದ ಅಂತಿಮ ಹಂತದಲ್ಲಿ ದಕ್ಷಿಣ ಕೊರಿಯಾದಲ್ಲಿ ಮಾತನಾಡುವ ವೇಳೆ, ಭಾರತ ಮತ್ತು ಅಮೆರಿಕಾ ನಡುವೆ ಬಹುಕಾಲದಿಂದ ಬಾಕಿ ಉಳಿದಿರುವ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ಘೋಷಿಸಿದರು. ಈ ಘೋಷಣೆ ಅಂತರರಾಷ್ಟ್ರೀಯ ವ್ಯಾಪಾರ ವಲಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ.* ಇದೀಗ ಭಾರತದಿಂದ ಅಮೆರಿಕಕ್ಕೆ ರಫ್ತು ಆಗುವ ಉತ್ಪನ್ನಗಳ ಮೇಲೆ:25% ಸುಂಕ ಜೊತೆಗೆ 25% ಹೆಚ್ಚುವರಿ ದಂಡ ಒಟ್ಟು 50% ಸುಂಕ ವಿಧಿಸಲಾಗುತ್ತಿದೆ.ಹೊಸ ವ್ಯಾಪಾರ ಒಪ್ಪಂದ ಜಾರಿಗೆ ಬಂದರೆ, ಈ ಸುಂಕವು 15% ಕ್ಕೆ ಇಳಿಯುವ ನಿರೀಕ್ಷೆಯಿದೆ. ಇದರಿಂದ ಭಾರತೀಯ ರಫ್ತುಗಾರರಿಗೆ ದೊಡ್ಡ ಆರ್ಥಿಕ ಸಹಾಯವಾಗಲಿದೆ.* ಭಾರತ–ಅಮೇರಿಕಾ ವಾರ್ಷಿಕ ವ್ಯಾಪಾರದ ಮೌಲ್ಯ: ಒಟ್ಟು: $125 ಬಿಲಿಯನ್ ಅಮೆರಿಕದಿಂದ ಭಾರತಕ್ಕೆ ಆಮದು: $40 ಬಿಲಿಯನ್ ಭಾರತದಿಂದ ಅಮೆರಿಕಕ್ಕೆ ರಫ್ತು: $80–$85 ಬಿಲಿಯನ್ಈ ಅಂಕಿ ಅಂಶಗಳು ಅಮೆರಿಕವು ಭಾರತದೊಂದಿಗೆ ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ ಎಂಬುದನ್ನು ತೋರಿಸುತ್ತವೆ. ಈ ಕೊರತೆಯನ್ನು ಕಡಿಮೆ ಮಾಡಲು ಟ್ರಂಪ್ ಆಡಳಿತವು ಜಾಗತಿಕವಾಗಿ ಹಲವು ದೇಶಗಳ ಮೇಲೆ ಸುಂಕವನ್ನು ಹೆಚ್ಚಿಸಿತು.* ವ್ಯಾಪಾರ ಒಪ್ಪಂದದ ನಂತರ ಆಟೋಮೊಬೈಲ್ ಬಿಡಿಭಾಗಗಳ ರಫ್ತು ಮಾಡುವ ಕಂಪನಿಗಳು ದೊಡ್ಡ ಪ್ರಯೋಜನ ಪಡೆಯಲಿವೆ. ಹಾಗೂ  ರಿಲಯನ್ಸ್, ಒಎನ್‌ಜಿಸಿ ಹಾಗೂ ಇತರೆ ತೈಲ ಕಂಪನಿಗಳಿಗೆ ಇದು ಆರ್ಥಿಕವಾಗಿ ಲಾಭಕರವಾಗಲಿದೆ.