* ಭಾರತ ಮತ್ತು ಅಮೆರಿಕದ ನಡುವಿನ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (BTA) ಐದನೇ ಸುತ್ತಿನ ಮಾತುಕತೆಗಳು ಜುಲೈ 17 ರಂದು ವಾಷಿಂಗ್ಟನ್ನಲ್ಲಿ ಮುಕ್ತಾಯಗೊಂಡಿವೆ.* ಜುಲೈ 14 ರಿಂದ ನಡೆದ ಈ ಚರ್ಚೆಗಳಿಗೆ ಭಾರತದ ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ಅಗರ್ವಾಲ್ ನೇತೃತ್ವ ವಹಿಸಿದ್ದರು.* ಅಗಸ್ಟ್ 1ರೊಳಗೆ ಮಧ್ಯಂತರ ಒಪ್ಪಂದಕ್ಕೆ ಸಮ್ಮತಿ ತಲುಪುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಈ ಮಾತುಕತೆಗಳು ಮಹತ್ತ್ವ ಪಡೆದಿವೆ. ಕೃಷಿ ಮತ್ತು ಡೈರಿ ಉತ್ಪನ್ನಗಳ ಸುಂಕ ರಿಯಾಯಿತಿಗಳ ಕುರಿತು ಅಮೆರಿಕ ಒತ್ತಾಯಿಸಿದ್ದರೂ, ಭಾರತ ತನ್ನ ನಿಲುವಿನಲ್ಲಿ ಕಠಿಣವಾಗಿದೆ.* ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಒಪ್ಪಂದದಲ್ಲಿ ಸೇರಿಸದಂತೆ ಕೆಲವು ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.* ಭಾರತವು ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋ ವಲಯಗಳ ಮೇಲಿನ ಹೆಚ್ಚುವರಿ ಸುಂಕಗಳನ್ನು ತಗ್ಗಿಸಲು ಚಿಂತನೆ ನಡೆಸುತ್ತಿದೆ. ಜತೆಗೆ WTO ಮಾನದಂಡಗಳ ಅಡಿಯಲ್ಲಿ ಪ್ರತೀಕಾರದ ಹಕ್ಕನ್ನು ಕಾಯ್ದಿರಿಸಿದೆ.* ಭಾರತವು ಜವಳಿ, ಆಭರಣ, ಉಡುಪು, ಕೃಷಿ ಉತ್ಪನ್ನಗಳಂತಹ ಹಲವಾರು ವಸ್ತುಗಳ ಸುಂಕದಲ್ಲಿ ರಿಯಾಯಿತಿ ಬಯಸುತ್ತಿದೆ.ಭಾರತ–EFTA (ಯುರೋಪಿಯನ್ ಮುಕ್ತ ವ್ಯಾಪಾರ ಸಂಘ) ಒಪ್ಪಂದ :* ಭಾರತ ಮತ್ತು EFTA (ಸ್ಪಿಟ್ಜರ್ಲ್ಯಾಂಡ್, ನಾರ್ವೆ, ಐಸ್ಲ್ಯಾಂಡ್, ಲಿಚ್ಟೆನ್ಸ್ಟೈನ್) ನಡುವೆ ವ್ಯಾಪಾರ ಮತ್ತು ಆರ್ಥಿಕ ಒಪ್ಪಂದ (TEPA) ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದರಿಂದ ಭಾರತದಲ್ಲಿ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಹೆಚ್ಚಾಗಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.* ಈ ಒಪ್ಪಂದದಿಂದ ಮುಂದಿನ 15 ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಮತ್ತು 1 ಮಿಲಿಯನ್ ನೇರ ಉದ್ಯೋಗಗಳ ಸೃಷ್ಟಿಯ ನಿರೀಕ್ಷೆ ಇದೆ.* ಭಾರತಕ್ಕೆ ಜಾಗತಿಕ ಮತ್ತು ಯುರೋಪಿಯನ್ ಮಾರುಕಟ್ಟೆಗೆ ಪ್ರವೇಶ ದೊರೆಯುವ ಜೊತೆಗೆ ‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ ದೊರೆಯಲಿದೆ.