* ಭಾರತೀಯ ನೌಕಾಪಡೆ ಮತ್ತು ಐರೋಪ್ಯ ರಾಷ್ಟ್ರಗಳ ನೌಕಾಪಡೆಗಳು ಶೀಘ್ರದಲ್ಲೇ ನೌಕಾ ಸಮರಾಭ್ಯಾಸವನ್ನು ನಡೆಸಲು ಯೋಜಿಸಿವೆ. ಈ ಸಮರಾಭ್ಯಾಸವು ಉಭಯ ರಾಷ್ಟ್ರಗಳ ಹಡಗುಗಳು ಮತ್ತು ವಿಮಾನಗಳನ್ನು ಒಳಗೊಂಡಿರಲಿದೆ. * ಇದು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಮತ್ತು ಸಾಂಪ್ರದಾಯಿಕವಲ್ಲದ ಕಡಲ ಬೆದರಿಕೆ ಗಳನ್ನು ಎದುರಿಸುವ ಗುರಿ ಹೊಂದಿದೆ. ಯುದ್ಧತಂತ್ರದ ಸಮನ್ವಯವನ್ನು ಸುಧಾರಿಸುವುದು, ಹಿಂದೂ ಮಹಾ ಸಾಗರದಲ್ಲಿ ಹೆಚ್ಚುತ್ತಿರುವ ಕಡಲ್ಗಳ್ಳತನ, ಕಳ್ಳಸಾಗಣೆ ಹಾಗೂ ಇತರೆ ಸಾಂಪ್ರದಾಯಿ ಕವಲದ ಬೆದರಿಕೆಗಳನ್ನು ಹತ್ತಿಕ್ಕುವುದು ಈ ಸಮರಾಭ್ಯಾಸದ ಧೈಯವಾಗಿದೆ. ಉಭಯ ರಾಷ್ಟ್ರಗಳ ನೌಕಾಪಡೆಗಳು ಮಾಡಿಕೊಂಡಿರುವ ಬಂದರು ಒಪ್ಪಂದಗಳನ್ವಯ ಈ ಸಮರಾಭ್ಯಾಸ ನಡೆಸಲಿವೆ.* ಪ್ರಸ್ತುತ ನಡೆಯಲಿರುವ ಸಮರಾಭ್ಯಾಸವು ಕಾನೂನುಬದ್ಧ ವ್ಯಾಪಾರವನ್ನು ರಕ್ಷಿಸಿ, ಅನಿಯಂತ್ರಿತ ಮೀನುಗಾರಿಕೆಯನ್ನು ನಿಗ್ರಹಿಸ ಲಿದೆ. 2025ರ ಮಾರ್ಚ್ನಲ್ಲಿ ಭಾರತ ಮತ್ತು ಯೂರೋಪಿಯನ್ ಒಕ್ಕೂಟ ಹಲವು ಚರ್ಚೆ ಗಳನ್ನು ನಡೆಸಿದ್ದು, ಕಡಲ ಭದ್ರತೆಯನ್ನು ಹೆಚ್ಚಿಸುವ ಕುರಿತೂ ಚರ್ಚಿಸಿತ್ತು. ಆ ಚರ್ಚೆಗೆ ಈ ಈ ಸಮರಾಭ್ಯಾಸವು ಪೂರಕವಾಗಲಿದೆ.