* ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ 2024-25ರ ಸರಣಿಯು 2024 ನ.22ರಂದು ಪರ್ತ್‌ನ ಅಪ್ಪಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತಿಳಿಸಿದೆ.* 1996-97 ರಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಪ್ರಾರಂಭಿಸಲಾಯಿತು.  ಆಸ್ಟ್ರೇಲಿಯಾದ ಲೆಜೆಂಡ್ ಅಲನ್ ಬಾರ್ಡರ್ ಹಾಗೂ ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಆಯೋಜಿಸಲಾಗಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸಿರೀಸ್ನಲ್ಲಿ ಇದುವರೆಗೆ 16 ಸರಣಿಗಳನ್ನು ಆಡಲಾಗಿದೆ. ಭಾರತ ತಂಡವು ಒಟ್ಟು 10 ಬಾರಿ ಸರಣಿ ಗೆದ್ದರೆ, ಆಸ್ಟ್ರೇಲಿಯಾ 5 ಸಲ ಟ್ರೋಫಿ ಎತ್ತಿ ಹಿಡಿದಿದೆ.* ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 1991-92 ರ ಬಳಿಕ ಇದೇ ಮೊದಲ ಬಾರಿಗೆ ಐದು ಪಂದ್ಯಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ನಾಲ್ಕು ಪಂದ್ಯಗಳಿಗೆ ಸೀಮಿತವಾಗಿತ್ತು.*  2ನೇ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಸರಣಿಯ 2ನೇ ಪಂದ್ಯವು ಡೇ ನೈಟ್ ಪಂದ್ಯವಾಗಿದೆ. ಈ ಅಹರ್ನಿಶಿ ಪಂದ್ಯವನ್ನು ಪಿಂಕ್ ಬಾಲ್ನಲ್ಲಿ ಆಡಲಾಗುತ್ತದೆ.* ವಿಶೇಷ ಎಂದರೆ 2016 ರಿಂದ ಆಸ್ಟ್ರೇಲಿಯಾ ತಂಡವು ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಸೋಲುಣಿಸಿಲ್ಲ. ಅಂದರೆ ಕಳೆದ ನಾಲ್ಕು ಸರಣಿಗಳಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಅದರಲ್ಲೂ 2020-21 ರ ಸರಣಿಯಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಭಾರತದ ಯುವ ಪಡೆದ ಹೊಸ ಇತಿಹಾಸ ಬರೆದಿತ್ತು. * ಭಾರತ vs ಆಸ್ಟ್ರೇಲಿಯಾ ಟೆಸ್ಟ್ ರಣಿ ವೇಳಾಪಟ್ಟಿ:- 1ನೇ ಟೆಸ್ಟ್ 2024 ನ.22 ರಿಂದ 26 ವರೆಗೆ ಪರ್ತ್ ಸ್ಪೇಡಿಯಂ, ಪರ್ತ್ ನಲ್ಲಿ ನಡೆಯಲಿದೆ. - 2ನೇ ಟೆಸ್ಟ್ (ಪಿಂಕ್ ಬಾಲ್‌) 2024 ಡಿ.6 ರಿಂದ 10 ವರೆಗೆ ಅಡಿಲೇಡ್ ಓವಲ್ ಸ್ಟೇಡಿಯಂ, ಅಡಿಲೇಡ್ ನಲ್ಲಿ ನಡೆಯಲಿದೆ.- 3ನೇ ಟೆಸ್ಟ್ 2024 ಡಿ.14 ರಿಂದ 18 ವರೆಗೆ ದಿ ಗಬ್ಬಾ ಸ್ಪೇಡಿಯಂ, ಬ್ರಿಸ್ಟೇನ್‌ ನಲ್ಲಿ ನಡೆಯಲಿದೆ.- 4ನೇ ಟೆಸ್ಟ್ (ಬಾಕ್ಸಿಂಗ್ ಡೆಲ) 2024 ಡಿ.26 ರಿಂದ 30 ವರೆಗೆ ಎಂಸಿಜಿ ಸ್ಟೇಡಿಯಂ, ಮೆಲ್ಲೋರ್ನ್ ನಲ್ಲಿ ನಡೆಯಲಿದೆ.- 5ನೇ ಟೆಸ್ಟ್ 2025 ಜ.3 ರಿಂದ 7 ವರೆಗೆ ಸಿಡ್ನಿ ಕ್ರಿಕೆಟ್ ಸ್ಟೇಡಿಯಂ, ಸಿಡ್ನಿ ನಲ್ಲಿ ನಡೆಯಲಿದೆ.