* 2047ರ ಹೊತ್ತಿಗೆ 2 ಸಾವಿರ ಲಕ್ಷ ಕೋಟಿಯಿಂದ 3 ಸಾವಿರ ಲಕ್ಷ ಕೋಟಿ ರೂ. ಜಿಡಿಪಿಯೊಂದಿಗೆ ಭಾರತದ ಆರ್ಥಿಕತೆಯು ಅಧಿಕ ಆದಾಯದ ದೇಶವಾಗಲಿದೆ.* ಜನಸಂಖ್ಯೆ, ತಾಂತ್ರಿಕ ಆವಿಷ್ಕಾರ ಮತ್ತು ಕ್ಷೇತ್ರವಾರು ಪರಿವರ್ತನೆ ಹಾಗೂ ವಾರ್ಷಿಕ ಶೇ. 8ರಿಂದ ಶೇ.10ರಷ್ಟು ಆರ್ಥಿಕ ಬೆಳವಣಿಗೆಯ ಬೆಂಬಲದೊಂದಿಗೆ ಪರಿವರ್ತನೆ ಸಾಧ್ಯವಾಗಲಿದೆ ಎಂದು ಬೈನ್ ಆ್ಯಂಡ್ ಕಂಪನಿ ಮತ್ತು ನಾಸ್ಕಾಂನ ವರದಿ ತಿಳಿಸಿದೆ.* 2027ರಲ್ಲಿ ಸೇವಾ ಕ್ಷೇತ್ರಗಳು ಶೇ.60 ಮತ್ತು ಉತ್ಪಾದನಾ ಕ್ಷೇತ್ರವು ಶೇ.32 ಆರ್ಥಿಕತೆಗೆ ಕೊಡುಗೆ ನೀಡುವ ನಿರೀಕ್ಷೆ ಇದೆ. ಎರಡೂ ಕ್ಷೇತ್ರಗಳು ಆರ್ಥಿಕ ವಿಸ್ತರಣೆಯಲ್ಲಿ ಪ್ರಮುಖವಾಗಿವೆ.* ಮುಂದಿನ ದಶಕದಲ್ಲಿ 200 ದಶಲಕ್ಷ ಮಂದಿ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಭಾರತಕ್ಕೆ ಉನ್ನತಮೌಲ್ಯದ ಉದ್ಯೋಗ ಸೃಷ್ಟಿ ಸಾಧ್ಯವಿದೆ ಎಂದು ವರದಿ ತಿಳಿಸಿದೆ.* ಎಲೆಕ್ಟ್ರಾನಿಕ್ಸ್, ಎನರ್ಜಿ, ಕೆಮಿಕಲ್ಸ್, ಆಟೋಮೊಬೈಲ್ ಮತ್ತು ಸೇವಾ ಕ್ಷೇತ್ರಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರಮುಖವಾಗಿದ್ದು, ವರಮಾನ, ಕೌಶಲ್ಯಭರಿತ ಉದ್ಯೋಗಗಳ ಏರಿಕೆ ಹಾಗೂ ಮೂಲಸೌಲಭ್ಯಗಳ ಸುಧಾರಣೆ ಬೆಳವಣಿಗೆಗೆ ಉತ್ತೇಜನ ನೀಡಲಿದೆ.* ನಾಸ್ಕಾಂನ ಹಿರಿಯ ಉಪಾಧ್ಯಕ್ಷೆ ಸಂಗೀತಾ ಗುಪ್ತಾ ಹೇಳುವಂತೆ, ಬ್ಯಾಕ್ವರ್ಡ್ ಇಂಟಿಗ್ರೇಷನ್ ಹಾಗೂ ಸ್ಥಳೀಯ ಉತ್ಪಾದನೆಯ ಒಗ್ಗೂಡಿಕೆImports ಮೇಲಿನ ಅವಲಂಬನೆ ಕಡಿಮೆ ಮಾಡಲಿದೆ. ಡಿಜಿಟಲ್, ಟ್ರಾನ್ಸ್ಪೋರ್ಟ್ ಮೂಲಸೌಲಭ್ಯ, ದೇಶೀ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿಗೆ ಉತ್ತೇಜನ ನೀಡುವುದರಿಂದ ಭಾರತ ಭವಿಷ್ಯದ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ನಾಯಕನಾಗುವ ಸಾಧ್ಯತೆ ಇದೆ.* ಭಾರತದ ಆರ್ಥಿಕ ಬೆಳವಣಿಗೆ ಮೂಲಸೌಲಭ್ಯದ ಬಲವರ್ಧನೆ, ಕೌಶಲ್ಯ ಕೊರತೆ ನಿವಾರಣೆ, ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಯಿಂದ ಆವಿಷ್ಕಾರಕ್ಕೆ ಉತ್ತೇಜನ ನೀಡುವುದರ ಮೇಲೆ ಅವಲಂಬಿತವಾಗಿದೆ.