* ನಂದಿಬೆಟ್ಟದಲ್ಲಿ ಬುಧವಾರ(ಜುಲೈ 02) ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಾಮಬದಲಾವಣೆಗಳಿಗೆ ತೀರ್ಮಾನವಾಯಿತು. ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿಯಾಗಿ ಬದಲಾವಣೆಗೆ ತೀರ್ಮಾನವಾಯಿತು.* ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಹಾಗೂ ಬಾಗೇಪಲ್ಲಿ ತಾಲ್ಲೂಕು ಕೇಂದ್ರದ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸಲು ನಿರ್ಣಯಿಸಲಾಯಿತು.* ಸಭೆಯಲ್ಲಿ ಒಟ್ಟು 48 ವಿಷಯಗಳು ಚರ್ಚೆಗೆ ಒಳಪಟ್ಟಿದ್ದು, ಅವುಗಳಲ್ಲಿ ಶೇ. 90ರಷ್ಟು ಬೆಂಗಳೂರು ವಿಭಾಗಕ್ಕೆ ಸಂಬಂಧಪಟ್ಟವು.* ಅಕ್ರಮ ಗಣಿಗಾರಿಕೆ ಕುರಿತು ಇಂದಿನವರೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಪರಿಶೀಲನೆಗಾಗಿ ಎಚ್.ಕೆ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯು ರಚನೆಗೆ ತೀರ್ಮಾನವಾಯಿತು.* ಎತ್ತಿನಹೊಳೆ ಯೋಜನೆ, ಕಾರ್ಮಿಕರ ಮಕ್ಕಳಿಗಾಗಿ ಪ್ರತಿ ಜಿಲ್ಲೆಯಲ್ಲಿ ವಸತಿ ಶಾಲೆಗಳ ಸ್ಥಾಪನೆ ಸೇರಿ ಹಲವು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.