* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದಲ್ಲೇ ಅತಿದೊಡ್ಡ ಹಸಿರು ಮೈದಾನ (Greenfield) ದೇಶೀಯ ಕಾರ್ಗೋ ಟರ್ಮಿನಲ್ ಪ್ರಾರಂಭಿಸಲಾಗಿದೆ.* ಬೆಂಗಳೂರು ವಿಮಾನ ನಿಲ್ದಾಣ ನಿಯಮಿತ (BIAL) ಮತ್ತು ಮೆನ್ಜೀಸ್ ಏವಿಯೇಷನ್ ಸಹಯೋಗದಲ್ಲಿ 245,000 ಚದರ ಅಡಿಯಲ್ಲಿ ನಿರ್ಮಿತ ಈ ಟರ್ಮಿನಲ್, ಹೈಟೆಕ್ ಮೂಲಸೌಕರ್ಯಗಳೊಂದಿಗೆ ದೇಶೀಯ ವಾಯುಮಾರ್ಗ ಸರಕು ಸಾಗಣೆಯ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲಿದೆ.* 7 ಎಕರೆಯಲ್ಲಿ ವಿಸ್ತಾರಗೊಂಡಿರುವ ಈ ಟರ್ಮಿನಲ್ 360,000-400,000 ಮೆಟ್ರಿಕ್ ಟನ್ ಸರಕು ನಿರ್ವಹಿಸಬಲ್ಲದು.* 42 ಬೃಹತ್ ಟ್ರಕ್, 400 ವಿಶೇಷ ಕಾರ್ಗೋ ಬೋಗಿಗಳು, ಎಕ್ಸ್-ರೇ ಯಂತ್ರ, 30 ಯುಎಲ್ಡಿ ಕೇಂದ್ರಗಳು, 40 ಹ್ಯಾಂಡೆಲ್ಡ್ ಟರ್ಮಿನಲ್ಗಳು, ಸ್ವಯಂ ಸೇವಾ ಕಿಯೋಸ್ಕರ್ ಸೇರಿದಂತೆ ಅನೇಕ ತಂತ್ರಜ್ಞಾನೀಯ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿದೆ.* ಇದು ತಾಜಾ ತರಕಾರಿಗಳು, ಹಣ್ಣುಗಳು, ಅಪಾಯಕಾರಿ ವಸ್ತುಗಳು, ಜೀವಂತ ಪ್ರಾಣಿಗಳು ಹಾಗೂ ವಿಕಿರಣಶೀಲ ವಸ್ತುಗಳ ಸಂಗ್ರಹಣೆಗೆ ಪ್ರತ್ಯೇಕ ಸೌಲಭ್ಯ ಒದಗಿಸುತ್ತದೆ.* ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿಕೊಂಡ ಈ ಟರ್ಮಿನಲ್ ಭವಿಷ್ಯದ ವಾಯುಮಾರ್ಗ ಸರಕು ಸಾಗಣೆಯ ನಿರ್ವಹಣೆಯನ್ನು ಸುಧಾರಿಸಲು ಮಹತ್ವದ ಹೆಜ್ಜೆ ಎಂದು ಬಿಐಎಲ್ ಸಿಇಒ ಸತ್ಯಕಿ ರಘುನಾಥ್ ತಿಳಿಸಿದ್ದಾರೆ.