* ಬೆಂಗಳೂರು ಜಲಮಂಡಳಿಯ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ನಿಂದ (BIS) ಪ್ರಮಾಣಪತ್ರ ಲಭಿಸಿದೆ.* ಅಂತರರಾಷ್ಟ್ರೀಯ ಮಾನದಂಡಗಳ ಪರಿಶೀಲನೆ ಬಳಿಕ, ಆರು ತಿಂಗಳಿನಿಂದ ವಿವಿಧ ಹಂತಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಎಲ್ಲ ಪರೀಕ್ಷೆ, ಪರಿಶೀಲನೆಗಳಲ್ಲಿ ಉತ್ತಮ ಗುಣಮಟ್ಟ ಕಂಡುಬಂದಿದ್ದರಿಂದ ಬಿಐಎಸ್ ಪ್ರಮಾಣ ನೀಡಿದೆ.* ಬಿಐಎಸ್ ಪ್ರಮಾಣೀಕರಣವು ಜಲಮಂಡಳಿಯ ನೀರಿನ ನಿರ್ವಹಣೆಯ ಸಂಪೂರ್ಣ ಕಾರ್ಯಾಚರಣೆಯನ್ನು ಒಳಗೊಂಡಿದ್ದು, ಇದರಲ್ಲಿ ನೀರಿನ ಸಂಸ್ಕರಣೆ, ಸಂಗ್ರಹಣೆ, ಪಂಪಿಂಗ್, ವಿತರಣಾ ಜಾಲ, ನಿರ್ವಹಣೆ, ಮೀಟರಿಂಗ್ ಮತ್ತು ಬಿಲ್ಲಿಂಗ್ ಒಳಗೊಂಡಿದೆ.* ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಲ ಮಂಡಳಿಗೆ ಬಿಐಎಸ್ ಪ್ರಮಾಣೀಕರಣ ದೊರೆತಿದ್ದು ಹೆಮ್ಮೆ ಎಂದು ಶ್ಲಾಘಿಸಿ, ಜನರಿಗೆ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸುವುದು ಪ್ರಾಥಮ್ಯವೆಂದು ಹೇಳಿದರು.* 'ನಾವು ಉನ್ನತ ನೀರಿನ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಹೊಂದಿದ್ದೇವೆ, ಇದು ಬ್ರ್ಯಾಂಡ್ ಬೆಂಗಳೂರು ಉಪಕ್ರಮವನ್ನು ಬಲಪಡಿಸುತ್ತದೆ' ಎಂದರು.* ಬಿಐಎಸ್ ಪ್ರಮಾಣಪತ್ರ ಲಭಿಸಿರುವುದು ಜಲಮಂಡಳಿಗೆ ಮಹತ್ವದ ಮೈಲಿಗಲ್ಲು ಎಂದು ಬಿಡಬ್ಲ್ಯುಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.