* ಬೆಂಗಳೂರು ಮೆಟ್ರೋ ಹಳದಿ ಮಾರ್ಗ (ಆರ್.ವಿ. ರಸ್ತೆ–ಬೊಮ್ಮಸಂದ್ರ) ಕೊನೆಗೂ ಆಗಸ್ಟ್ 10ರಂದು ಉದ್ಘಾಟನೆಗೊಳ್ಳಲಿದೆ. 19.15 ಕಿಮೀ ಉದ್ದದ ಈ ಮಾರ್ಗಕ್ಕೆ ಸುರಕ್ಷತಾ ಪ್ರಮಾಣಪತ್ರ ಲಭ್ಯವಾಗಿದ್ದು, ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.* 16 ನಿಲ್ದಾಣಗಳನ್ನು ಹೊಂದಿರುವ ಈ ಮಾರ್ಗದಲ್ಲಿ ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ ಮೆಟ್ರೋ ಓಡಲಿದೆ. ಪ್ರಾರಂಭದಲ್ಲಿ ಕೇವಲ ನಾಲ್ಕು ರೈಲುಗಳಿದ್ದರಿಂದ 25 ನಿಮಿಷಕ್ಕೆ ಒಂದೇ ಟ್ರೈನ್ ಸಂಚಾರ ನಡೆಸಲಿದೆ.* ಪ್ರಾರಂಭದಲ್ಲಿ ದಿನಕ್ಕೆ 25 ಸಾವಿರ ಪ್ರಯಾಣಿಕರ ಸಂಚಾರ ನಿರೀಕ್ಷೆ. 15 ರೈಲುಗಳಿದ್ದ ಬಳಿಕ ಇದು 1.5–2 ಲಕ್ಷಕ್ಕೇರಲಿದೆ. ಸಂಪೂರ್ಣ ಕಾರ್ಯಾಚರಣೆ ಆರಂಭವಾದಾಗ ಕನಿಷ್ಠ ಆದಾಯ ₹60 ಲಕ್ಷ ತಲುಪುವ ನಿರೀಕ್ಷೆ.* 2014ರಲ್ಲಿ ಪ್ರಾರಂಭವಾದ ಯೋಜನೆ 2021ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಕಾಮಗಾರಿ ಮುಗಿದರೂ, ಚೀನಾದ ಕಂಪನಿಯಿಂದ ರೈಲು ಪೂರೈಕೆಯಲ್ಲಿ ತಡವಾದ ಕಾರಣ ಉದ್ಘಾಟನೆ ಮುಂದೂಡಿಕೆಯಾಗಿತ್ತು.