* ಯೂನಿವರ್ಸಿಟಿ ಆಫ್ ಹೈದರಾಬಾದ್ ನಡೆಸಿದ ಸಮೀಕ್ಷೆಯ ಪ್ರಕಾರ, ಬೆಂಗಳೂರು 2025ರ ಮೊದಲ ಮೂರು ತಿಂಗಳಲ್ಲಿ ಅಪರಾಧ ಪ್ರಮಾಣ ತಗ್ಗಿಸಿರುವುದು ಗಮನಿಸಬಹುದಾದ ವಿಷಯವಾಗಿದೆ.* ಈ ಮೂಲಕ ಬೆಂಗಳೂರು 'ಭಾರತದ ಅತ್ಯಂತ ಸುರಕ್ಷಿತ ನಗರ' ಎಂಬ ಬಿರುದಿಗೆ ಪಾತ್ರವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.* 2025ರ ಮೊದಲ ತ್ರೈಮಾಸಿಕದಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳಲ್ಲಿ ಶೇ.12ರಷ್ಟು ಇಳಿಕೆಯಾಗಿದೆ.* ಸೈಬರ್ ವಂಚನೆ ಶೇ.39ರಷ್ಟು, ಡಕಾಯಿತಿ ಶೇ.71ರಷ್ಟು, ರಾಬರಿ ಶೇ.73ರಷ್ಟು, ಸರಗಳ್ಳತನ ಶೇ.57ರಷ್ಟು ಹಾಗೂ ರಾತ್ರಿ ಕಳವು ಶೇ.41ರಷ್ಟು ಕಡಿಮೆಯಾಗಿದೆ.* ಇತ್ತ ಕೋಲ್ಕತಾ, ಅಪರಾಧ ದರದಲ್ಲಿ ಏರಿಕೆ ಕಾಣಿಸಿಕೊಂಡು 'ಅತ್ಯಂತ ಅಸುರಕ್ಷಿತ ನಗರ' ಎನ್ನುವ ಹಣೆಪಟ್ಟಿಗೆ ಗುರಿಯಾಗಿದೆ.* ನಗರದಲ್ಲಿ ಕಳ್ಳತನ, ಸೈಬರ್ ಕ್ರೈಂ ಮತ್ತು ಇತರ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಪೊಲೀಸರ ಮೇಲಿನ ನಂಬಿಕೆ ಕುಂದಿದೆ ಎಂದು ಸಮೀಕ್ಷೆ ತೋರುತ್ತದೆ.