* ಬೆಂಗಳೂರಿನಲ್ಲಿ ಜನವರಿ 05ರಂದು 22ನೇ ವರ್ಷದ ಚಿತ್ರಸಂತೆ ನಡೆಯಿತು. 22 ರಾಜ್ಯಗಳಿಂದ 1500 ಕಲಾವಿದರು ಭಾಗವಹಿಸಿದ್ದರು. 40,000ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.* ಚಿತ್ರ ಸಂತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಈ ಬಾರಿ ಮಹಿಳೆಯರಿಗೆ ಅರ್ಪಿತವಾದ ಈ ಸಂತೆಯಲ್ಲಿ, ಹೆಣ್ಣುಮಕ್ಕಳ ಜೀವನದ ವಿವಿಧ ಅಂಶಗಳನ್ನು ಚಿತ್ರಿಸುವ ಕಲಾಕೃತಿಗಳು ಪ್ರಮುಖ ಆಕರ್ಷಣೆಗಳಾಗಿದ್ದವು. * ಪ್ರತಿ ವರ್ಷದಂತೆ ಈ ಬಾರಿಯೂ ಕೂಡಾ ದೇಶ ವಿದೇಶಗಳಿಂದ ಬಂದಿರುವ ಕಲಾವಿದರು ತಾವು ಬಿಡಿಸಿದ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕೆಲವು ಚಿತ್ರಪಟಗಳು ಮಾರಾಟಕ್ಕೂ ಇದ್ದವು.* ಶಿವಾನಂದ ವೃತ್ತದಿಂದ ವಿಡ್ಸರ್ ಮ್ಯಾನರ್ವರೆಗೂ 22ನೇ ವರ್ಷದ ಚಿತ್ರ ಸಂತೆ ಆಯೋಜಿಸಲಾಗಿತ್ತು. ಸಂತೆಯಲ್ಲಿ 100 ರೂ.ನಿಂದ 1ಲಕ್ಷವರೆಗಿನ ಕಲಾಕೃತಿಗಳು ಮಾರಾಟಕ್ಕಿದ್ದವು.* ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣು ಮಗುವಿಗೆ ಅರ್ಪಣೆ ಮಾಡಲಾಗಿತ್ತು. ಈ ಹಿನ್ನೆಲೆ ಚಿತ್ರ ಕಲಾಪರಿಷತ್ತಿನ ಮುಂಭಾಗದಲ್ಲಿ ಪೇಪರ್ ಬೈಂಡಿಂಗ್ನಿಂದ ಬೃಹತ್ ಹೆಣ್ಣು ಮಗುವಿನ ಕಲಾಕೃತಿ ಮಾಡಲಾಗಿತ್ತು.* ಚಿತ್ರಗಳ ಜೊತೆಗೆ, ಮಣ್ಣಿನ ಮಡಿಕೆ, ಫೇಸ್ ಪೇಂಟಿಂಗ್ ಮುಂತಾದ ಇತರ ಕಲಾಕೃತಿಗಳು ಜನರನ್ನು ಆಕರ್ಷಿಸಿದವು.