Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಬೆಂಗಳೂರಿನಲ್ಲಿ ರಾಜ್ಯದ ಮೊದಲ 'Gen-Z' ಪೋಸ್ಟ್ ಆಫೀಸ್ ಉದ್ಘಾಟನೆ
18 ಡಿಸೆಂಬರ್ 2025
* ಡಿಜಿಟಲ್ ಯುಗಕ್ಕೆ ತಕ್ಕಂತೆ ಬದಲಾಗುತ್ತಿರುವ ಭಾರತೀಯ ಅಂಚೆ ಇಲಾಖೆಯು (India Post) ಇದೀಗ ಯುವಜನತೆಯನ್ನು ಸೆಳೆಯಲು ನವೀನ ಮಾದರಿಯ 'Gen-Z' ಅಂಚೆ ಕಚೇರಿಗಳನ್ನು ಪರಿಚಯಿಸುತ್ತಿದೆ. ಈ ನಿಟ್ಟಿನಲ್ಲಿ
ಕರ್ನಾಟಕದ ಮೊಟ್ಟಮೊದಲ Gen-Z ಪೋಸ್ಟ್ ಆಫೀಸ್
ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (AIT) ಕ್ಯಾಂಪಸ್ನಲ್ಲಿ ಡಿಸೆಂಬರ್ 2025ರಲ್ಲಿ ಕಾರ್ಯಾರಂಭ ಮಾಡಿದೆ.
*
ಏನಿದು Gen-Z ಪೋಸ್ಟ್ ಆಫೀಸ್ :
ಸಾಂಪ್ರದಾಯಿಕ ಅಂಚೆ ಕಚೇರಿಗಳೆಂದರೆ ನಮಗೆ ನೆನಪಿಗೆ ಬರುವುದು ಸಾಲು ಸಾಲು ಕಡತಗಳು ಮತ್ತು ಹಳೆಯ ಕಟ್ಟಡಗಳು. ಆದರೆ, ಈ Gen-Z ಅಂಚೆ ಕಚೇರಿಯು ಸಂಪೂರ್ಣವಾಗಿ ಬದಲಾಗಿದ್ದು, ಇದು ಒಂದು ಆಧುನಿಕ
'ಕೆಫೆ' (Café)
ತರಹದ ವಾತಾವರಣವನ್ನು ಹೊಂದಿದೆ. ಯುವಜನತೆಯ ಅಭಿರುಚಿಗೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
* ವಿದ್ಯಾರ್ಥಿಗಳೇ ಸ್ವತಃ ಇಂಟೀರಿಯರ್ ಡಿಸೈನ್ ಮಾಡಿರುವ ಈ ಕಚೇರಿ ಅತ್ಯಾಧುನಿಕ ಹಾಗೂ ಆಕರ್ಷಕ ಸೌಲಭ್ಯಗಳಿಂದ ಗಮನಸೆಳೆಯುತ್ತದೆ. ವಿದ್ಯಾರ್ಥಿಗಳು ಮತ್ತು ಗ್ರಾಹಕರಿಗಾಗಿ ಉಚಿತ ಹೈ-ಸ್ಪೀಡ್ Wi-Fi ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ವಿಶೇಷವಾಗಿ ರೂಪಿಸಿದ ಸೆಲ್ಫಿ ಪಾಯಿಂಟ್, ಕಾಫಿ ಮಷೀನ್ ಹಾಗೂ ಆರಾಮದಾಯಕ ಆಸನಗಳೊಂದಿಗೆ ಕೆಫೆ ಸೌಲಭ್ಯ ಇಲ್ಲಿ ಲಭ್ಯವಿದೆ. ಬಿಡುವಿನ ವೇಳೆಯಲ್ಲಿ ಮನರಂಜನೆಗಾಗಿ ಬೋರ್ಡ್ ಗೇಮ್ಸ್ ಹಾಗೂ ಪುಸ್ತಕ ಓದಲು ಬುಕ್ ಬೂತ್ಗಳನ್ನು ಒದಗಿಸಲಾಗಿದ್ದು, ಡಿಜಿಟಲ್ ಸ್ನೇಹಿ ವಾತಾವರಣಕ್ಕಾಗಿ ಎಲೆಕ್ಟ್ರಾನಿಕ್ ಸಾಧನಗಳಿಗೆ ಚಾರ್ಜಿಂಗ್ ಪಾಯಿಂಟ್ಗಳನ್ನೂ ಅಳವಡಿಸಲಾಗಿದೆ. ಜೊತೆಗೆ, ವೈಬ್ರಂಟ್ ಬಣ್ಣಗಳು ಮತ್ತು ವಿದ್ಯಾರ್ಥಿಗಳ ಕಲಾಕೃತಿಗಳಿಂದ ಅಲಂಕರಿಸಲಾದ ಗೋಡೆಗಳು ಕಚೇರಿಗೆ ಕಲಾತ್ಮಕ ಮತ್ತು ಸೃಜನಾತ್ಮಕ ರೂಪವನ್ನು ನೀಡಿವೆ.
* ಈ ಯೋಜನೆಯ ಉದ್ದೇಶ ಮತ್ತು ಪ್ರಾಮುಖ್ಯತೆ ಇಂದಿನ ಯುವ ಪೀಳಿಗೆ (Gen-Z) ಯೊಂದಿಗೆ ನೇರ ಸಂಪರ್ಕ ಸಾಧಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಹಾಗೂ ವಿವಿಧ ಸೇವೆಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಸ್ಪೀಡ್ ಪೋಸ್ಟ್ ಮತ್ತು ಪಾರ್ಸಲ್ ಸೇವೆಗಳನ್ನು ಆಧುನಿಕ ಹಾಗೂ ಆಕರ್ಷಕ ಶೈಲಿಯಲ್ಲಿ ಒದಗಿಸುವುದೇ ಇದರ ಮುಖ್ಯ ಗುರಿಯಾಗಿದೆ. ಇದರ ಮೂಲಕ ಇಂಡಿಯಾ ಪೋಸ್ಟ್ ಅನ್ನು ಯುವಜನರಲ್ಲಿ ನಂಬಿಕೆಗೂ ಜೊತೆಗೆ ಆಕರ್ಷಕ ಹಾಗೂ ಸಮಕಾಲೀನ ಬ್ರ್ಯಾಂಡ್ ಆಗಿ ರೂಪಿಸುವ ಪ್ರಯತ್ನ ಮಾಡಲಾಗಿದೆ.
Take Quiz
Loading...