* ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಗಳೂರು ಸೂಕ್ತ ಸೌಕರ್ಯಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಜುಲೈ 31 ಮತ್ತು ಆಗಸ್ಟ್ 1 ರಂದು ‘ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮ್ಮೇಳನ’ ಆಯೋಜಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.* ಇದು ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಸಮಾವೇಶವಾಗಿದ್ದು, ಮೊದಲ ದಿನ ನೊಬೆಲ್ ಪುರಸ್ಕೃತರಾದ ಪ್ರೊ. ಡಂಕನ್ ಹಲ್ದಾನೆ ಮತ್ತು ಪ್ರೊ. ಡೇವಿಡ್ ಗ್ರಾಸ್ ಮುಖ್ಯ ಭಾಷಣ ಮಾಡಲಿದ್ದಾರೆ.* ಸಮಾವೇಶದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್, ಫೈನಾನ್ಸ್, ಹೆಲ್ತ್ ಕೇರ್, ಸೆಕ್ಯೂರಿಟಿ, ಹಾರ್ಡ್ವೇರ್ ಮತ್ತು ಆರ್ಟ್ ಕ್ಷೇತ್ರಗಳಲ್ಲಿ ತಜ್ಞರಿಂದ ಮಾಹಿತಿ ವಿನಿಮಯ ನಡೆಯಲಿದೆ.* ರಾಜ್ಯ ಸರ್ಕಾರ ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನದಲ್ಲಿ ಮುಂಚೂಣಿ ರಾಜ್ಯವನ್ನಾಗಿ ರೂಪಿಸಲು ಬದ್ಧವಾಗಿದೆ. ಈ ದಿಕ್ಕಿನಲ್ಲಿ ‘ಕರ್ನಾಟಕ ಕ್ವಾಂಟಮ್ ಕ್ರಿಯಾ ಯೋಜನೆ’ ರೂಪಿಸಲಾಗುತ್ತಿದ್ದು, ತಜ್ಞರನ್ನೊಳಗೊಂಡ ಕಾರ್ಯಪಡೆ ರಚನೆಗೂ ಸಿದ್ಧತೆ ನಡೆಯುತ್ತಿದೆ.* ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಕೆಸ್ಟೆಪ್ಸ್ ನಿರ್ದೇಶಕ ಸದಾಶಿವ ಪ್ರಭು ಹಾಗೂ ಸಮ್ಮೇಳನದ ಸಂಚಾಲಕರಾದ ಪ್ರೊ. ಅರಿಂದಮ್ ಘೋಷ್ ಮತ್ತು ಪ್ರೊ. ಅಕ್ಷಯ್ ನಾಯ್ಕ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.