* ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ನಿರ್ಮಿಸಿರುವ ಶ್ರೇಷ್ಠತಾ ಕೇಂದ್ರವನ್ನು ಲೋಕಾರ್ಪಣೆ ಮಾಡಿತು. ಇದರೊಂದಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು (ಎನ್‌ಸಿಎ) 'ಬಿಸಿಸಿಐ ಶ್ರೇಷ್ಠತಾ ಕೇಂದ್ರ'ವೆಂದು ಮರುನಾಮಕರಣ ಮಾಡಲಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಎನ್‌ಸಿಎ ಈಗ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರವಾಗಲಿದೆ.* ಹೊಸ ಸೌಲಭ್ಯವು 40 ಎಕರೆಗಳನ್ನು ವ್ಯಾಪಿಸಿದೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ ಮತ್ತು ಹಲವಾರು ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ.* ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಭವ್ಯವಾದ ಶ್ರೇಷ್ಠತಾ ಕೇಂದ್ರ ತಲೆ ಎತ್ತಿದೆ. ಅಂದಹಾಗೆ ಎನ್‌ಸಿಎ ಇನ್ನು 'ಮುಂದೆ ಬಿಸಿಸಿಐ ಶ್ರೇಷ್ಠತಾ ಕೇಂದ್ರವೆಂದು ಕರೆಸಿಕೊಳ್ಳಲಿದೆ. * ಸೆಪ್ಟೆಂಬರ್ 26 ರಂದು (ಶನಿವಾರ) ನಡೆದ ಸಮಾರಂಭದಲ್ಲಿ ಈ ಮರುನಾಮಕರಣ ಮಾಡಿ ಹಾಗೂ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಯಿತು.* 85 ಯಾರ್ಡ್ ಬೌಂಡರಿ ಇರುವ ವಿಶ್ವದರ್ಜೆ ಕ್ರೀಡಾಂಗಣ ಇದು. ಮುಂಬೈ ಕೆಂಪು ಮಣ್ಣಿನಿಂದ ಸಿದ್ದಗೊಳಿಸಿರುವ 13 ಪಿಚ್‌ಗಳು ಇಲ್ಲಿವೆ. ಹೊನಲು ಬೆಳಕಿನ ಕಂಬಗಳು, ಸೌಥ್ ಪೆವಿಲಿಯನ್ ಮತ್ತು ಪಂದ್ಯಗಳ ನೇರಪ್ರಸಾರ ಸೌಲಭ್ಯ ಕೇಂದ್ರ ಕೂಡ ಇಲ್ಲಿದೆ.* 75 ಯಾರ್ಡ್ ಬೌಂಡರಿ ಇರುವ ಇದರಲ್ಲಿ ಮಂಡ್ಯದ ಕಪ್ಪುಮಣ್ಣು ಬಳಸಿ ಮಾಡಲಾಗಿರುವ 11 ಪಿಚ್‌ಗಳಿವೆ. ಪಕ್ಕದಲ್ಲಿರುವ ಮೂರನೇ ಮೈದಾನ (ಸಿ)ದಲ್ಲಿ ಒಡಿಶಾದ ಕಲಾಹಾಂಡಿಯಿಂದ ತರಿಸಿರುವ ಕಪ್ಪುಮಣ್ಣಿನಿಂದ ಸಿದ್ಧವಾದ 9 ಪಿಚ್‌ಗಳಿವೆ. ಈ ಮೂರು ಮೈದಾನಗಳಲ್ಲಿ ಮಳೆ ನೀರು ತ್ವರಿತವಾಗಿ ಹರಿದುಹೋಗಲು ಸಬ್‌ಸರ್ಫೇಸ್ ವ್ಯವಸ್ಥೆ ಮಾಡಲಾಗಿದೆ.* ಮೈದಾನಗಳಾಚೆ ನೆಟ್ಸ್ ಅಭ್ಯಾಸಕ್ಕಾಗಿ 45 ಪಿಚ್‌ಗಳು ಇವೆ. ಜೊತೆಗೆ ಹೊನಲು ಬೆಳಕಿನ ವ್ಯವಸ್ಥೆ ಇದೆ. ಓಟದ ಅಭ್ಯಾಸಕ್ಕಾಗಿ ಟ್ರಾಕ್ ಮತ್ತು ಫೀಲ್ಡಿಂಗ್ ಅಭ್ಯಾಸದ ಸೌಕರ್ಯಗಳು ಇವೆ. ಕ್ಯಾಮೆರಾಗಳ ಮೂಲಕ ಆಟಗಾರರ ಸಾಮರ್ಥ್ಯ ವಿಶ್ಲೇಷಿಸುವ ತಂತ್ರಜ್ಞಾನ ಇಲ್ಲಿ ಅಳವಡಿಸಲಾಗಿದೆ.* ಅಕಾಡೆಮಿಯು ಜಕುಝಿ, ಲೌಂಜ್, ಮಸಾಜ್ ರೂಮ್, ಕಿಟ್ ರೂಮ್ ಮತ್ತು ರೆಸ್ಟ್ ರೂಂಗಳನ್ನು ಒಳಗೊಂಡಂತೆ ಅನೇಕ ಸ್ಟೇಟ್ ಆಫ್ ದಿ ಆರ್ಟ್ ಸೌಕರ್ಯಗಳನ್ನು ಹೊಂದಿದೆ. ನಿರೂಪಕ ಮತ್ತು ರೆಫರಿ ಕೊಠಡಿಗಳು, ಫಿಸಿಯೋಥೆರಪಿ ರಿಹ್ಯಾಬ್ ಜಿಮ್, ಇತ್ತೀಚಿನ ತಂತ್ರಜ್ಞಾನದೊಂದಿಗೆ ಕ್ರೀಡಾ ವಿಜ್ಞಾನ ಮತ್ತು ಔಷಧ ಪ್ರಯೋಗಾಲಯ.