* ಸರ್ಕಾರಿ ಸ್ವಾಮ್ಯದ ಏರೋ ಸ್ಪೇಸ್ ಹಾಗೂ ರಕ್ಷಣಾ ವಲಯದ ಕಂಪನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ಗೆ ಕೇಂದ್ರ ಸರ್ಕಾರ ಮಹಾರತ್ನ ಸ್ಥಾನಮಾನ ನೀಡಿದೆ.* ಈ ಸ್ಥಾನಮಾನ ಪಡೆದ 14ನೇ ಕಂಪನಿಯಾಗಿ ಹೆಚ್‌ಎಎಲ್ ಗುರುತಿಸಿಕೊಂಡಿದೆ. ಸಾರ್ವಜನಿಕ ಉದ್ಯಮಗಳ ಇಲಾಖೆ (ಡಿಪಿಇ) ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನುಮೋದನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.* ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಅವುಗಳ ಕ್ಷಮತೆ ಮತ್ತು ವಿಶಾಲತೆಯ ಆಧಾರದ ಮೇಲೆ ಮಹಾರತ್ನ, ನವರತ್ನ, ಮಿನಿರತ್ನ 1, ಮಿನಿರತ್ನ 2 ಎಂದು ವರ್ಗೀಕರಿಸಲಾಗಿದೆ. ಮಹಾರತ್ನ ಎಂಬುದು ಅತ್ಯುನ್ನತ ಮಟ್ಟದ್ದಾಗಿರುತ್ತದೆ. * ಮಹಾರತ್ನ ಪಟ್ಟಿಯಲ್ಲಿ ಎಚ್ಎಎಲ್ ಸೇರ್ಪಡೆ ಬಳಿಕ 14 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿವೆ. ನವರತ್ನ ವಿಭಾಗದಲ್ಲಿ 24 ಸಂಸ್ಥೆಗಳಿವೆ. ಮಿನಿರತ್ನ-1 ಕೆಟಗರಿಯಲ್ಲಿ 51 ಕಂಪನಿಗಳಿದ್ದರೆ, ಮಿನಿರತ್ನ-2 ವಿಭಾಗದಲ್ಲಿ 11 ಸಂಸ್ಥೆಗಳಿವೆ.* ‘ನವರತ್ನ’ ಸ್ಥಾನ ಹೊಂದಿದ್ದ ಎಚ್ಎಎಲ್ ಅನ್ನು ‘ಮಹಾರತ್ನ’ ಸ್ಥಾನಕ್ಕೇರಿಸಲು ಎರಡು ಉನ್ನತ ಮಟ್ಟದ ಸಮಿತಿಗಳು ಶಿಫಾರಸು ಮಾಡಿದ್ದವು. ಕೇಂದ್ರ ಹಣಕಾಸು ಕಾರ್ಯದರ್ಶಿ ನೇತೃತ್ವದ ಅಂತರ ಸಚಿವೀಯ ಸಮಿತಿ Inter-Ministerial Committee (IMC),  ಹಾಗೂ ಸಂಪುಟ ಕಾರ್ಯದರ್ಶಿ ನೇತೃತ್ವದ ಏಪೆಕ್ಸ್ (Apex Committee) ಸಮಿತಿಯಿಂದ ಶಿಫಾರಸು ಮಾಡಲಾಗಿತ್ತು.* ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಪ್ರೊಡಕ್ಷನ್ (DoDP) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ HAL, 2023-24 ರ ಆರ್ಥಿಕ ವರ್ಷದಲ್ಲಿ 28,162 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ಮತ್ತು 7,595 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ದಾಖಲಿಸಿದೆ. ಈ ಅಪ್‌ಗ್ರೇಡ್‌ನೊಂದಿಗೆ HAL 14 ನೇ ಮಹಾರತ್ನ Central Public Sector Enterprise (CPSE) ಆಗುತ್ತದೆ.* ಮಹಾರತ್ನ ಸ್ಥಾನಮಾನ ಪಡೆದ ಸರ್ಕಾರಿ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಕಡಿಮೆ ಇರುತ್ತದೆ. ಅದರ ಕಾರ್ಯಾಚರಣೆಯ ಸ್ವಾಯತ್ತತೆ ಹೆಚ್ಚಿರುತ್ತದೆ. ಅಂದರೆ ಹೆಚ್ಚಿನ ಮೊತ್ತದ ವ್ಯವಹಾರಗಳನ್ನು ಸರ್ಕಾರದ ಅನುಮತಿ ಇಲ್ಲದೇ ಸ್ವತಂತ್ರವಾಗಿ ತೆಗೆದುಕೊಳ್ಳಬಹುದು. ಈಗ ಮಹಾರತ್ನ ಸ್ಥಾನ ಪಡೆದಿರುವ ಎಚ್ಎಎಲ್ ಸಂಸ್ಥೆ ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು.* ತನ್ನ ನಿವ್ವಳ ಮೌಲ್ಯದ 15% ಪ್ರತಿಶತದಷ್ಟು ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು ಮತ್ತು ಸರ್ಕಾರದ ಅನುಮೋದನೆಯಿಲ್ಲದೆ ವಿದೇಶಿ ಉದ್ಯಮಗಳಲ್ಲಿ 5,000 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು.ಭಾರತದಲ್ಲಿನ ಮಹಾರತ್ನ ಕಂಪನಿಗಳ ಪಟ್ಟಿ :- * HAL ಭಾರತದಲ್ಲಿ 14ನೇ ಮಹಾರತ್ನ ಕಂಪನಿಯಾಗಲಿದೆ. ಮೊದಲ 13 ಮಹಾರತ್ನ ಕಂಪನಿಗಳು ಕೆಳಕಂಡಂತಿವೆ:1.  ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (NTPC) ಲಿಮಿಟೆಡ್2.  ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಲಿಮಿಟೆಡ್3.  ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)4.  ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)5.  ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)6.  ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)7.  ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್)8.  GAIL ಇಂಡಿಯಾ ಲಿಮಿಟೆಡ್9.  ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL)10.  ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್11.  ಪವರ್ ಫೈನಾನ್ಸ್ ಕಾರ್ಪೊರೇಷನ್ (PFC)12.  ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ (REC) ಲಿಮಿಟೆಡ್13.  ಆಯಿಲ್ ಇಂಡಿಯಾ ಲಿಮಿಟೆಡ್ (OIL)14.  ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)