* ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಜಗತ್ತಿನ ವಿಶ್ವವಿದ್ಯಾಲಯಗಳ ಪೈಕಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.* 2025ನೇ ಸಾಲಿನ 'ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್' ಬಿಡುಗಡೆಯಾಗಿದೆ.* ಶಿಕ್ಷಣ ಸಂಸ್ಥೆಗಳ ಸಂಶೋಧನೆ, ಬೋಧನೆ, ಸಂಶೋಧನಾ ಗುಣಮಟ್ಟ, ಅಂತಾರಾಷ್ಟ್ರೀಯ ಹೊರನೋಟಗಳು ಮತ್ತು ಆದಾಯಗಳಿಕೆ ಮೊದಲಾದ ಅಂಶಗಳನ್ನು ಪರಿಗಣಿಸಿ ಈ ರ‍್ಯಾಂಕಿಂಗ್ ಬಿಡುಗಡೆ ಮಾಡಲಾಗಿದೆ.* ಭಾರತದ ಹಲವಾರು ವಿವಿಗಳು ಈ ಬಾರಿ ಶೈಕ್ಷಣಿಕ ಗುಣಮಟ್ಟದಲ್ಲಿ ಸುಧಾರಣೆಯನ್ನು ಕಂಡಿದ್ದು, ಅವುಗಳ ಪೈಕಿ ಅನ್ನಾ ಯೂನಿವರ್ಸಿಟಿ, ಮಹಾತ್ಮ ಗಾಂಧಿ ವಿವಿ, ಸವಿತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಮತ್ತು ತಾಂತ್ರಿಕ ವಿಜ್ಞಾನ ಸಂಸ್ಥೆ ಮೊದಲಾದ ಸಂಸ್ಥೆಗಳು ಸುಧಾರಣೆ ಕಂಡಿವೆ ಎಂದು ವರದಿಯಲ್ಲಿ ಹೇಳಲಾಗಿದೆ.