Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗತಿಕ ಗರಿ: ಸತತ 4ನೇ ಬಾರಿಗೆ 'ವಿಶ್ವದ ಅತ್ಯುತ್ತಮ ಆಗಮನ ಏರ್ಪೋರ್ಟ್' ಪ್ರಶಸ್ತಿ!
Authored by:
Akshata Halli
Date:
6 ಮಾರ್ಚ್ 2026
➤
ಬೆಂಗಳೂರು:
ಸಿಲಿಕಾನ್ ಸಿಟಿ ಬೆಂಗಳೂರಿನ ಹೆಮ್ಮೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಜಾಗತಿಕ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಪ್ರಯಾಣಿಕರ ಸೌಕರ್ಯ ಮತ್ತು ಗುಣಮಟ್ಟದ ಸೇವೆಯಲ್ಲಿ ವಿಶ್ವದ ಗಮನ ಸೆಳೆದಿರುವ ಈ ನಿಲ್ದಾಣವು, ಸತತ ನಾಲ್ಕನೇ ಬಾರಿಗೆ
'ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ' (Best Airport at Arrivals Globally)
ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
➤
ACI ASQ Awards 2025:
ವಿಮಾನ ನಿಲ್ದಾಣಗಳ ಒಕ್ಕೂಟವಾದ 'ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್' (ACI) ಪ್ರತಿ ವರ್ಷ 'ಏರ್ಪೋರ್ಟ್ ಸರ್ವಿಸ್ ಕ್ವಾಲಿಟಿ' (ASQ) ಸಮೀಕ್ಷೆಯ ಆಧಾರದ ಮೇಲೆ ಈ ಪ್ರಶಸ್ತಿಗಳನ್ನು ನೀಡುತ್ತದೆ. ಇದು ಪ್ರಯಾಣಿಕರ ನೈಜ ಪ್ರತಿಕ್ರಿಯೆ, ವಿಮಾನ ನಿಲ್ದಾಣದ ಸ್ವಚ್ಛತೆ, ಸೌಕರ್ಯ, ವೇಗವಾಗಿ ಲಗೇಜ್ ತಲುಪುವಿಕೆ ಮತ್ತು ಒಟ್ಟಾರೆ ಪ್ರಯಾಣದ ಅನುಭವವನ್ನು ಆಧರಿಸಿ ನೀಡಲಾಗುವ ಅತ್ಯಂತ ವಿಶ್ವಾಸಾರ್ಹ ಪ್ರಶಸ್ತಿಯಾಗಿದೆ.
➤
ಸತತ ನಾಲ್ಕನೇ ಬಾರಿ ಸಾಧನೆ:
2025ನೇ ಸಾಲಿನ ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಬೆಂಗಳೂರು ವಿಮಾನ ನಿಲ್ದಾಣವು ತನ್ನ ಅತ್ಯುತ್ತಮ ಸೇವೆಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿರುವುದನ್ನು ಸಾಬೀತುಪಡಿಸಿದೆ. ವಾರ್ಷಿಕ ಸುಮಾರು
43.8 ಮಿಲಿಯನ್
ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ನಿಲ್ದಾಣವು, ಆಗಮನ (Arrival) ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲೇ ನಂಬರ್ 1 ಸ್ಥಾನ ಪಡೆದಿದೆ.
➤
ಬೆಂಗಳೂರು ಏರ್ಪೋರ್ಟ್ನ ಈ ಸಾಧನೆಯನ್ನು ಶ್ಲಾಘಿಸಿರುವ ಮೂಲಸೌಕರ್ಯ ಅಭಿವೃದ್ಧಿ ಸಚಿವ
ಎಂ.ಬಿ. ಪಾಟೀಲ್
, "ಇದು ಕೇವಲ ಬೆಂಗಳೂರಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ನಮ್ಮ ವಿಮಾನ ನಿಲ್ದಾಣವು ವಿಶ್ವದರ್ಜೆಯ ಸೌಕರ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
➤
ಬೆಂಗಳೂರು ವಿಮಾನ ನಿಲ್ದಾಣವು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲು ಅಲ್ಲಿನ ವೇಗದ ಆಗಮನ ಪ್ರಕ್ರಿಯೆ, ಟರ್ಮಿನಲ್ಗಳ ಅತ್ಯುತ್ತಮ ಸ್ವಚ್ಛತೆ ಮತ್ತು ಪರಿಸರ ಸ್ನೇಹಿ ನಿರ್ವಹಣೆ, ಡಿಜಿಜಾತ್ರೆಯಂತಹ ಸುಧಾರಿತ ತಂತ್ರಜ್ಞಾನದ ಬಳಕೆ ಹಾಗೂ 'ಉದ್ಯಾನ ನಗರಿ'ಯ ಪ್ರತಿಬಿಂಬದಂತಿರುವ ಟರ್ಮಿನಲ್ 2ರ ಅದ್ಭುತ ವಾಸ್ತುಶಿಲ್ಪ ಮತ್ತು ಪ್ರಯಾಣಿಕ ಸ್ನೇಹಿ ಸೌಕರ್ಯಗಳು ಪ್ರಮುಖ ಕಾರಣಗಳಾಗಿವೆ.
➤
ಈಗಾಗಲೇ ಟರ್ಮಿನಲ್ 1 ಮತ್ತು ಟರ್ಮಿನಲ್ 2 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು
ಟರ್ಮಿನಲ್ 3 (T3)
ಸ್ಥಾಪನೆಗೆ ತಯಾರಿಗಳು ನಡೆಯುತ್ತಿವೆ. ಇದು ಬೆಂಗಳೂರನ್ನು ದಕ್ಷಿಣ ಭಾರತದ ಪ್ರಮುಖ ವೈಮಾನಿಕ ಕೇಂದ್ರವನ್ನಾಗಿ (Aviation Hub) ಮತ್ತಷ್ಟು ಬಲಪಡಿಸಲಿದೆ.
Take Quiz
Loading...