Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಬೆಳಗಾವಿ ಅಧಿವೇಶನದಲ್ಲಿ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಹೊಸ ದಾಖಲೆ: ಸತತ 11 ಗಂಟೆಗಳ ಕಾಲ ಸದನ ನಿರ್ವಹಣೆ!
22 ಡಿಸೆಂಬರ್ 2025
* ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ 2025ರ ಚಳಿಗಾಲದ ಅಧಿವೇಶನದ ಮುಕ್ತಾಯದ ದಿನವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಧಾನಪರಿಷತ್ ಸಭಾಪತಿಗಳಾದ
ಬಸವರಾಜ ಹೊರಟ್ಟಿ
ಅವರು ಸತತವಾಗಿ
11 ಗಂಟೆ 10 ನಿಮಿಷಗಳ ಕಾಲ
ಸದನವನ್ನು ನಡೆಸುವ ಮೂಲಕ ತಮ್ಮದೇ ಹಳೆಯ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
* ಡಿಸೆಂಬರ್ 19, 2025 (ಶುಕ್ರವಾರ)ರಂದು ಬೆಳಗಾವಿಯ
ಸುವರ್ಣ ವಿಧಾನಸೌಧದಲ್ಲಿ
ನಡೆದ ಅಧಿವೇಶನದಲ್ಲಿ, ಸಭಾಪತಿ ಹೊರಟ್ಟಿ ಅವರು ಬೆಳಿಗ್ಗೆ
10.15ಕ್ಕೆ ಕಲಾಪ ಆರಂಭಿಸಿ
, ರಾತ್ರಿ
11 ಗಂಟೆಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವವರೆಗೂ
ಸಕ್ರಿಯವಾಗಿ ಸದನವನ್ನು ಮುನ್ನಡೆಸಿದರು. ಮಧ್ಯಾಹ್ನ ಊಟದ
ಒಂದು ಗಂಟೆಯ ವಿರಾಮ
ಮತ್ತು ಕೇವಲ
10 ನಿಮಿಷಗಳ ಕಿರು ವಿಶ್ರಾಂತಿ
ಹೊರತುಪಡಿಸಿ, ಉಳಿದ ಸಂಪೂರ್ಣ ಅವಧಿಯಲ್ಲಿ ಅವರು
ಸಭಾಪತಿ ಪೀಠದಲ್ಲೇ ಕುಳಿತು ಕಲಾಪವನ್ನು ನಿರ್ವಹಿಸಿದರು
* ಸತತ 45 ವರ್ಷಗಳಿಂದ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಹೊರಟ್ಟಿ ಅವರು ಈಗಾಗಲೇ ವಿಶ್ವದಾಖಲೆ ನಿರ್ಮಿಸಿರುವ ಹಿರಿಯ ರಾಜಕಾರಣಿ. ಇದಕ್ಕೂ ಮೊದಲು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಚರ್ಚೆಯ ವೇಳೆ ಸತತ 7 ಗಂಟೆಗಳ ಕಾಲ ಸದನ ನಡೆಸಿದ್ದರೂ, ಈ ಬಾರಿ ಅದನ್ನೂ ಮೀರಿಸಿದ ಸಾಧನೆ ಮಾಡಿದ್ದಾರೆ.
* ಸಭಾಪತಿ ಬಸವರಾಜ ಹೊರಟ್ಟಿ ಅವರ ಈ ದೀರ್ಘಕಾಲದ ಸೇವೆ, ಕಾರ್ಯಕ್ಷಮತೆ ಮತ್ತು ಶಿಸ್ತುಬದ್ಧ ಸದನ ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Take Quiz
Loading...