* ಜಾಗತಿಕ ಹವಾಮಾನ ಬದಲಾವಣೆ ಸಮಸ್ಯೆ ಗಂಭೀರವಾಗುತ್ತಿರುವ ಸಂದರ್ಭದಲ್ಲಿ, ಐಕ್ಯರಾಷ್ಟ್ರಗಳು ಹವಾಮಾನ ಬದಲಾವಣೆ ಕುರಿತ ಮಹತ್ವದ ಶೃಂಗಸಭೆಯನ್ನು ಬ್ರೆಜಿಲ್‌ನ ಬೇಲೆಮ್ ನಗರದಲ್ಲಿ ಸೋಮವಾರ ನಡೆಸಲು ತಯಾರಿ ನಡೆಸುತ್ತಿದೆ.* ಈ ಶೃಂಗಸಭೆಯ ಉದ್ದೇಶ, ಹವಾಮಾನ ತಾಪಮಾನ ಹೆಚ್ಚಳವನ್ನು ನಿಯಂತ್ರಿಸುವುದು, ಕಾಡು ಸಂರಕ್ಷಣೆ, ಹವಾಮಾನ ನ್ಯಾಯ ಮತ್ತು ಪರಿಸರ ಸಮತೋಲನಕ್ಕೆ ಅಗತ್ಯವಾದ ಜಾಗತಿಕ ಸಹಕಾರವನ್ನು ಬಲಪಡಿಸುವುದು.* ಜಾಗತಿಕ ನಾಯಕರು, ವಿಜ್ಞಾನಿಗಳು, ಪರಿಸರ ವೈಜ್ಞಾನಿಕ ಸಂಸ್ಥೆಗಳು ಹಾಗೂ ಸಮುದಾಯ ಪ್ರತಿನಿಧಿಗಳು ಹವಾಮಾನ ಬದಲಾವಣೆಯ ತುರ್ತು ಕ್ರಮಗಳ ಕುರಿತು ಚರ್ಚೆಮಾಡಲಿದ್ದಾರೆ.* ಬೇಲೆಮ್ ಸಭೆಯು “ಅಮೆಜಾನ್” ಅರಣ್ಯದ ಹತ್ತಿರ ಆಯೋಜನೆಯಾಗುತ್ತಿರುವುದು ವಿಶೇಷ. ಅಮೆಜಾನ್ ಅರಣ್ಯವನ್ನು “ಭೂಮಿಯ ಶ್ವಾಸಕೋಶ” ಎಂದು ಕರೆಯಲಾಗುತ್ತದೆ.* ಅದು ಜಾಗತಿಕ ಕಾರ್ಬನ್ ಉತ್ಸರ್ಜನವನ್ನು ಕಡಿಮೆಗೊಳಿಸಲು ಮಹತ್ತರ ಪಾತ್ರ ವಹಿಸುತ್ತದೆ. ಅರಣ್ಯ ನಾಶ, ಅಗ್ನಿ, ಕಳಪೆ ನಿರ್ವಹಣೆ ಹಾಗೂ ಅಕ್ರಮ ಕಟಾವು ಪರಿಸರ ಸಮತೋಲನಕ್ಕೆ ಅಪಾಯ ತಂದಿದೆ. ಈ ಹಿನ್ನೆಲೆಯಲ್ಲಿ, ಬೇಲೆಮ್ ಶೃಂಗಸಭೆ ಕಾರ್ಯಪದ್ಧತಿಯ ತಿರುವು ಬಿಂದುವಾಗಲಿದೆ.* ಭಾರತವು ಈ ಶೃಂಗಸಭೆಯಲ್ಲಿ ಪರಿಸರ ಸ್ನೇಹಿ ನೀತಿಗಳು, ಗ್ರೀನ್ ಹೈಡ್ರೋಜನ್ ಮಿಷನ್, ಸೌರ ಶಕ್ತಿ ಪರ್ಯಾಯಗಳು ಕುರಿತು ತನ್ನ ಯೋಜನೆಗಳನ್ನು ಪ್ರಸ್ತುತಪಡಿಸಲಿದೆ. “LiFE (Lifestyle for Environment)” ಎಂಬ ಜಾಗೃತಿ ಕಾರ್ಯಕ್ರಮದ ಮೂಲಕ ಪ್ರಪಂಚದಾದ್ಯಂತ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸಲು ಭಾರತ ಪ್ರಸ್ತಾಪಿಸಲಿದೆ.* ಬಡ ರಾಷ್ಟ್ರಗಳು ಹವಾಮಾನ ಬದಲಾವಣೆಯ ಪರಿಣಾಮವನ್ನು ತಡೆದುಕೊಳ್ಳಲು ತಂತ್ರಜ್ಞಾನ ಮತ್ತು ಹಣಕಾಸಿನ ನೆರವು ಅಗತ್ಯ. ಶ್ರೀಮಂತ ರಾಷ್ಟ್ರಗಳು ವಾಗ್ದಾನ ಮಾಡಿದ ಪ್ರತಿ ವರ್ಷ 100 ಬಿಲಿಯನ್ ಡಾಲರ್ ನೆರವು ನೀಡುವ ವಿಷಯ ಮತ್ತೆ ಚರ್ಚೆಗೆ ಬರಲಿದೆ.* ಈ ಸಭೆಯಲ್ಲಿ ಪ್ಯಾರಿಸ್ ಒಪ್ಪಂದ ಅಡಿಯಲ್ಲಿ ರಾಷ್ಟ್ರಗಳ ಕ್ರಮಗಳ ಚರ್ಚೆ ನಡೆಯುತ್ತಿದೆ.ಹಾಗೆಯೇ ಭಾರತ ಈಗಾಗಲೇ ಪ್ಯಾರಿಸ್ ಒಪ್ಪಂದದ ಅಡಿ ನವೀಕರಿಸಬಹುದಾದ ಇಂಧನ ಗುರಿಗಳನ್ನು ಐದು ವರ್ಷ ಮುಂಚಿತವಾಗಿ ಸಾಧಿಸಿವೆ.* 2030 ರೊಳಗೆ 500 ಗಿಗಾವ್ಯಾಟ್ ಪಳೆಯುಳಿಕೆತರ ಇಂಧನ ಸಾಮರ್ಥ್ಯ ಸಾಧಿಸುವ ಗುರಿಯತ್ತ ಭಾರತ ವಿಶ್ವಾಸ ದಿಂದ ಮುಂದಾಗಿದೆ.🌱  ಐಕ್ಯರಾಷ್ಟ್ರಗಳ ಶೃಂಗಸಭೆಯ ಪ್ರಮುಖ ಗುರಿಗಳು:- ಕಾರ್ಬನ್ ಉತ್ಸರ್ಗ ನಿಯಂತ್ರಣ: ಕೈಗಾರಿಕೆಗಳಲ್ಲಿ ಮಾಲಿನ್ಯ ನಿಯಂತ್ರಣ, ಕಾರ್ಬನ್ ಕ್ರೆಡಿಟ್ ವ್ಯವಸ್ಥೆ ಬಲಪಡಿಸುವುದು.- ಪುನರುತ್ಪಾದಕ ಶಕ್ತಿಗೆ ಉತ್ತೇಜನ: ಸೌರ, ಗಾಳಿಯಂತಹ ಶುದ್ಧ ಶಕ್ತಿಸ್ರೋತಗಳಲ್ಲಿ ಹೂಡಿಕೆ.- ಅರಣ್ಯ ಸಂರಕ್ಷಣೆ: ಅಮೆಜಾನ್ ಮತ್ತು ಇತರೆ ಜಗತ್ತಿನ ಅರಣ್ಯ ಪ್ರದೇಶಗಳನ್ನು ರಕ್ಷಿಸುವ ಜಾಗತಿಕ ಒಪ್ಪಂದ.- ಹವಾಮಾನ ನ್ಯಾಯ: ಹವಾಮಾನ ಬದಲಾವಣೆ ವಿಷಯದಲ್ಲಿ ಗರಿಬ ರಾಷ್ಟ್ರಗಳಿಗೆ ಆರ್ಥಿಕ ನೆರವು.- ಸಮುದ್ರದ ರಕ್ಷಣಾ ಯೋಜನೆ: ಸಮುದ್ರದ ತಾಪಮಾನ, ಜಲಮಾಲಿನ್ಯ, ಪ್ರವಾಳ ಸಂರಕ್ಷಣೆ ವಿಷಯಗಳ ಚರ್ಚೆ.