Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಬೇಲೆಂನಲ್ಲಿ ಜಾಗತಿಕ ಹವಾಮಾನ ಚರ್ಚೆ: ಐಕ್ಯ ರಾಷ್ಟ್ರಗಳ ಮಹಾ ಸಭೆ
11 ನವೆಂಬರ್ 2025
* ಜಾಗತಿಕ ಹವಾಮಾನ ಬದಲಾವಣೆ ಸಮಸ್ಯೆ ಗಂಭೀರವಾಗುತ್ತಿರುವ ಸಂದರ್ಭದಲ್ಲಿ, ಐಕ್ಯರಾಷ್ಟ್ರಗಳು ಹವಾಮಾನ ಬದಲಾವಣೆ ಕುರಿತ ಮಹತ್ವದ ಶೃಂಗಸಭೆಯನ್ನು
ಬ್ರೆಜಿಲ್ನ ಬೇಲೆಮ್ ನಗರದಲ್ಲಿ ಸೋಮವಾರ
ನಡೆಸಲು ತಯಾರಿ ನಡೆಸುತ್ತಿದೆ.
* ಈ ಶೃಂಗಸಭೆಯ ಉದ್ದೇಶ, ಹವಾಮಾನ ತಾಪಮಾನ ಹೆಚ್ಚಳವನ್ನು ನಿಯಂತ್ರಿಸುವುದು, ಕಾಡು ಸಂರಕ್ಷಣೆ, ಹವಾಮಾನ ನ್ಯಾಯ ಮತ್ತು ಪರಿಸರ ಸಮತೋಲನಕ್ಕೆ ಅಗತ್ಯವಾದ ಜಾಗತಿಕ ಸಹಕಾರವನ್ನು ಬಲಪಡಿಸುವುದು.
* ಜಾಗತಿಕ ನಾಯಕರು, ವಿಜ್ಞಾನಿಗಳು, ಪರಿಸರ ವೈಜ್ಞಾನಿಕ ಸಂಸ್ಥೆಗಳು ಹಾಗೂ ಸಮುದಾಯ ಪ್ರತಿನಿಧಿಗಳು ಹವಾಮಾನ ಬದಲಾವಣೆಯ ತುರ್ತು ಕ್ರಮಗಳ ಕುರಿತು ಚರ್ಚೆಮಾಡಲಿದ್ದಾರೆ.
* ಬೇಲೆಮ್ ಸಭೆಯು
“ಅಮೆಜಾನ್”
ಅರಣ್ಯದ ಹತ್ತಿರ ಆಯೋಜನೆಯಾಗುತ್ತಿರುವುದು ವಿಶೇಷ. ಅಮೆಜಾನ್ ಅರಣ್ಯವನ್ನು
“ಭೂಮಿಯ ಶ್ವಾಸಕೋಶ”
ಎಂದು ಕರೆಯಲಾಗುತ್ತದೆ.
* ಅದು ಜಾಗತಿಕ ಕಾರ್ಬನ್ ಉತ್ಸರ್ಜನವನ್ನು ಕಡಿಮೆಗೊಳಿಸಲು ಮಹತ್ತರ ಪಾತ್ರ ವಹಿಸುತ್ತದೆ. ಅರಣ್ಯ ನಾಶ, ಅಗ್ನಿ, ಕಳಪೆ ನಿರ್ವಹಣೆ ಹಾಗೂ ಅಕ್ರಮ ಕಟಾವು ಪರಿಸರ ಸಮತೋಲನಕ್ಕೆ ಅಪಾಯ ತಂದಿದೆ. ಈ ಹಿನ್ನೆಲೆಯಲ್ಲಿ, ಬೇಲೆಮ್ ಶೃಂಗಸಭೆ ಕಾರ್ಯಪದ್ಧತಿಯ ತಿರುವು ಬಿಂದುವಾಗಲಿದೆ.
* ಭಾರತವು ಈ ಶೃಂಗಸಭೆಯಲ್ಲಿ ಪರಿಸರ ಸ್ನೇಹಿ ನೀತಿಗಳು, ಗ್ರೀನ್ ಹೈಡ್ರೋಜನ್ ಮಿಷನ್, ಸೌರ ಶಕ್ತಿ ಪರ್ಯಾಯಗಳು ಕುರಿತು ತನ್ನ ಯೋಜನೆಗಳನ್ನು ಪ್ರಸ್ತುತಪಡಿಸಲಿದೆ
. “LiFE (Lifestyle for Environment)”
ಎಂಬ ಜಾಗೃತಿ ಕಾರ್ಯಕ್ರಮದ ಮೂಲಕ ಪ್ರಪಂಚದಾದ್ಯಂತ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸಲು ಭಾರತ ಪ್ರಸ್ತಾಪಿಸಲಿದೆ.
* ಬಡ ರಾಷ್ಟ್ರಗಳು ಹವಾಮಾನ ಬದಲಾವಣೆಯ ಪರಿಣಾಮವನ್ನು ತಡೆದುಕೊಳ್ಳಲು ತಂತ್ರಜ್ಞಾನ ಮತ್ತು ಹಣಕಾಸಿನ ನೆರವು ಅಗತ್ಯ. ಶ್ರೀಮಂತ ರಾಷ್ಟ್ರಗಳು ವಾಗ್ದಾನ ಮಾಡಿದ
ಪ್ರತಿ ವರ್ಷ 100 ಬಿಲಿಯನ್ ಡಾಲರ್
ನೆರವು ನೀಡುವ ವಿಷಯ ಮತ್ತೆ ಚರ್ಚೆಗೆ ಬರಲಿದೆ.
* ಈ ಸಭೆಯಲ್ಲಿ ಪ್ಯಾರಿಸ್ ಒಪ್ಪಂದ ಅಡಿಯಲ್ಲಿ ರಾಷ್ಟ್ರಗಳ ಕ್ರಮಗಳ ಚರ್ಚೆ ನಡೆಯುತ್ತಿದೆ.ಹಾಗೆಯೇ ಭಾರತ ಈಗಾಗಲೇ ಪ್ಯಾರಿಸ್ ಒಪ್ಪಂದದ ಅಡಿ ನವೀಕರಿಸಬಹುದಾದ ಇಂಧನ ಗುರಿಗಳನ್ನು ಐದು ವರ್ಷ ಮುಂಚಿತವಾಗಿ ಸಾಧಿಸಿವೆ.
*
2030 ರೊಳಗೆ 500 ಗಿಗಾವ್ಯಾಟ್ ಪಳೆಯುಳಿಕೆತರ ಇಂಧನ
ಸಾಮರ್ಥ್ಯ ಸಾಧಿಸುವ ಗುರಿಯತ್ತ ಭಾರತ ವಿಶ್ವಾಸ ದಿಂದ ಮುಂದಾಗಿದೆ.
🌱
ಐಕ್ಯರಾಷ್ಟ್ರಗಳ ಶೃಂಗಸಭೆಯ ಪ್ರಮುಖ ಗುರಿಗಳು:
- ಕಾರ್ಬನ್ ಉತ್ಸರ್ಗ ನಿಯಂತ್ರಣ: ಕೈಗಾರಿಕೆಗಳಲ್ಲಿ ಮಾಲಿನ್ಯ ನಿಯಂತ್ರಣ, ಕಾರ್ಬನ್ ಕ್ರೆಡಿಟ್ ವ್ಯವಸ್ಥೆ ಬಲಪಡಿಸುವುದು.
- ಪುನರುತ್ಪಾದಕ ಶಕ್ತಿಗೆ ಉತ್ತೇಜನ: ಸೌರ, ಗಾಳಿಯಂತಹ ಶುದ್ಧ ಶಕ್ತಿಸ್ರೋತಗಳಲ್ಲಿ ಹೂಡಿಕೆ.
- ಅರಣ್ಯ ಸಂರಕ್ಷಣೆ: ಅಮೆಜಾನ್ ಮತ್ತು ಇತರೆ ಜಗತ್ತಿನ ಅರಣ್ಯ ಪ್ರದೇಶಗಳನ್ನು ರಕ್ಷಿಸುವ ಜಾಗತಿಕ ಒಪ್ಪಂದ.
- ಹವಾಮಾನ ನ್ಯಾಯ: ಹವಾಮಾನ ಬದಲಾವಣೆ ವಿಷಯದಲ್ಲಿ ಗರಿಬ ರಾಷ್ಟ್ರಗಳಿಗೆ ಆರ್ಥಿಕ ನೆರವು.
- ಸಮುದ್ರದ ರಕ್ಷಣಾ ಯೋಜನೆ: ಸಮುದ್ರದ ತಾಪಮಾನ, ಜಲಮಾಲಿನ್ಯ, ಪ್ರವಾಳ ಸಂರಕ್ಷಣೆ ವಿಷಯಗಳ ಚರ್ಚೆ.
Take Quiz
Loading...