* ಅಪೋಲೊ ಟೈರ್ಸ್ ಕಂಪನಿಯು ಭಾರತ ಕ್ರಿಕೆಟ್ ತಂಡದ ಮುಂದಿನ ಎರಡೂವರೆ ವರ್ಷಗಳ ಪ್ರಧಾನ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ ಎಂದು ಬಿಸಿಸಿಐ ಘೋಷಿಸಿದೆ. ಇದಕ್ಕಾಗಿ ಕಂಪನಿಯು ₹579 ಕೋಟಿಗಳ ಒಪ್ಪಂದ ಮಾಡಿಕೊಂಡಿದೆ.* ಈ ಹಿಂದೆ ಡ್ರೀಮ್ 11 ಪ್ರಧಾನ ಪ್ರಾಯೋಜಕವಾಗಿತ್ತು. ಆದರೆ ಕೇಂದ್ರ ಸರ್ಕಾರ ಹೊಸ ಕಾನೂನಿನಡಿ ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ಗಳಿಗೆ ನಿಷೇಧ ಹೇರಿದ ಕಾರಣ ಬಿಸಿಸಿಐ ಹೊಸ ಪ್ರಾಯೋಜಕರನ್ನು ಹುಡುಕಬೇಕಾಯಿತು.* ಅಪೋಲೊ ಟೈರ್ಸ್ ಇದೇ ಮೊದಲ ಬಾರಿ ಕ್ರಿಕೆಟ್ ಪ್ರಾಯೋಜಕತ್ವಕ್ಕೆ ಕಾಲಿಟ್ಟಿದ್ದು, ಒಪ್ಪಂದ 2028ರ ಮಾರ್ಚ್ವರೆಗೆ ಮುಂದುವರಿಯಲಿದೆ.* ಈ ಅವಧಿಯಲ್ಲಿ ಭಾರತ 121 ದ್ವಿಪಕ್ಷೀಯ ಮತ್ತು 21 ಐಸಿಸಿ ಪಂದ್ಯಗಳನ್ನು ಆಡಲಿದೆ.* ಭಾರತದ ಪುರುಷರ ಹಾಗೂ ಮಹಿಳಾ ತಂಡದ ಜರ್ಸಿಯಲ್ಲಿ ಶೀಘ್ರದಲ್ಲೇ ಅಪೋಲೊ ಟೈರ್ಸ್ ಲೋಗೊ ಕಾಣಿಸಿಕೊಳ್ಳಲಿದೆ.* ಕಂಪನಿಯ ಕೇಂದ್ರ ಕಚೇರಿ ಗುರುಗ್ರಾಮದಲ್ಲಿದ್ದು, ಭಾರತ ಹಾಗೂ ಯುರೋಪ್ ಸೇರಿ ಅನೇಕ ದೇಶಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.