* ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ನಾಯಕಿ ಬೇಗಂ ಖಲೀದಾ ಜಿಯಾ ಸುದೀರ್ಘ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. * ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದಾಗಿ ಬಳಲುತ್ತಿದ್ದ ಖಲೀದಾ ಜಿಯಾ, ಕಳೆದ ನವೆಂಬರ್ 23ರಂದು ಎವರ್ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಮಾಜಿ ಪ್ರಧಾನಿಗೆ ಕಳೆದ 36 ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಇಂದು (ಡಿ.30-ಮಂಗಳವಾರ) ಬೆಳಗ್ಗೆ 6 ಗಂಟೆಗೆ ಅವರ ನಿಧನದ ಸುದ್ದಿಯನ್ನು ಪ್ರಕಟಿಸಿದರು.* 1991ರಲ್ಲಿ ಖಲೀದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಬಾಂಗ್ಲಾದೇಶ ನ್ಯಾಷನಲ್ ಪಕ್ಷದ ಅಧ್ಯಕ್ಷೆಯಾಗಿದ್ದ ಖಲೀದಾ ಅವರು ಮುಂಬರುವ ಚುನಾವಣೆಯಲ್ಲಿ ಜಯ ಸಾಧಿಸಿ ಪ್ರಧಾನಿಯಾಗುವ ಕನಸು ಕಂಡಿದ್ದರು.* ಖಲೀದಾ ಜಿಯಾ ಪ್ರಯಾಣ- ಆಗಸ್ಟ್ 15, 1945 ರಂದು ಜನಿಸಿದ ಖಲೀದಾ ಜಿಯಾ, 1981 ರಲ್ಲಿ ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಮತ್ತು ಬಿಎನ್ಪಿ ಸ್ಥಾಪಕ ಪತಿ ಜಿಯಾವುರ್ ರೆಹಮಾನ್ ಅವರ ಹತ್ಯೆಯ ನಂತರ ಖ್ಯಾತಿಗೆ ಏರಿದರು.- ನಂತರ ರಾಜಕೀಯ ಪ್ರವೇಶಿಸಿದ ಅವರು, ವರ್ಷಗಳ ಮಿಲಿಟರಿ ಆಡಳಿತದ ನಂತರ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಬಾಂಗ್ಲಾದೇಶದ ಹೋರಾಟದಲ್ಲಿ ಕೇಂದ್ರ ವ್ಯಕ್ತಿಯಾಗಿ ಹೊರಹೊಮ್ಮಿದರು.- ಅವರು ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾದರು ಮತ್ತು ಪಾಕಿಸ್ತಾನದ ಬೆನಜೀರ್ ಭುಟ್ಟೋ ನಂತರ ಮುಸ್ಲಿಂ ಜಗತ್ತಿನ ಎರಡನೇ ಮಹಿಳಾ ಪ್ರಧಾನಿಯಾದರು.* ಖಲೀದಾ ಜಿಯಾ ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.=> 1991-1996: ಸಂಸದೀಯ ಪ್ರಜಾಪ್ರಭುತ್ವ ಪುನಃಸ್ಥಾಪನೆಯ ನಂತರ ಬಾಂಗ್ಲಾದೇಶವನ್ನು ಮುನ್ನಡೆಸಿದರು.=> 2001-2006: ಬಿಎನ್ಪಿ ನೇತೃತ್ವದ ಚುನಾವಣಾ ಗೆಲುವಿನ ನಂತರ ಅಧಿಕಾರಕ್ಕೆ ಮರಳಿದರು.