* ಬಾಂಗ್ಲಾದೇಶದ ಅನುಭವಿ ಆಟಗಾರ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕರ್ ರಹೀಮ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ.* 37 ವರ್ಷದ ವಿಕೆಟ್ಕೀಪರ್-ಬ್ಯಾಟರ್ ತಮ್ಮ 50 ಓವರ್ಗಳ ವೃತ್ತಿಜೀವನಕ್ಕೆ ತೆರೆ ಎಳೆದರು.* ಕಳೆದ ಎರಡು ವಾರಗಳಲ್ಲಿ ನಾನು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ ಎಂದು ಮುಶ್ಫಿಕರ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮೂಲಕ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.* ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಬಾಂಗ್ಲಾದೇಶ ತಂಡವು ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು.* ದುಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಸೋತ ನಂತರ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ ದಿನವೇ ಮುಶ್ಫಿಕರ್ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.* 2005ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ದ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಮುಶ್ಫೀಕರ್ ರಹೀಂ, ಬಾಂಗ್ಲಾ ಪರ ಅತಿ ಹೆಚ್ಚು ಏಕದಿನ ಕ್ರಿಕೆಟ್ ಆಡಿದ ಆಟಗಾರನಾಗಿದ್ದಾರೆ. ಅವರು 2022ರಲ್ಲಿ ಟಿ20 ಕ್ರಿಕೆಟ್ ನಿಂದ ದೂರವಾಗಿದ್ದು, ಇನ್ನು ಕೇವಲ ಟೆಸ್ಟ್ ಪಂದ್ಯಗಳಿಗೆ ಲಭ್ಯರಿದ್ದಾರೆ.* ಬಾಂಗ್ಲಾದೇಶ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆ ಮುಷ್ಫಿಕರ್ ರಹೀಮ್ ಅವರದ್ದು (274). ಶಕೀಬ್ ಅಲ್ ಹಸನ್ (247), ತಮೀಮ್ ಇಕ್ಬಾಲ್ (243), ಮಹ್ಮದುಲ್ಲಾ (239) ಮತ್ತು ಮಶ್ರಫೆ ಮೊರ್ತಾಜಾ (218) ತಮ್ಮ ವೃತ್ತಿಜೀವನದಲ್ಲಿ 200 ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಇತರ ಬಾಂಗ್ಲಾದೇಶ ಕ್ರಿಕೆಟಿಗರಾಗಿದ್ದಾರೆ.* ಬಾಂಗ್ಲಾದೇಶದ ಪರ ಏಕದಿನ ಪಂದ್ಯಗಳಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮುಷ್ಫಿಕರ್ ರಹೀಮ್ ನಿವೃತ್ತರಾದರು (274 ಪಂದ್ಯಗಳಿಂದ 7795). ತಮೀಮ್ ಇಕ್ಬಾಲ್ ಮಾತ್ರ 8357 ರನ್ಗಳೊಂದಿಗೆ ಅವರಿಗಿಂತ ಮುಂದಿದ್ದಾರೆ.* ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಏಕದಿನ ರನ್ ಗಳಿಸಿದವರ ಪಟ್ಟಿಯಲ್ಲಿ ಮುಷ್ಫಿಕರ್ ರಹೀಮ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 260 ಪಂದ್ಯಗಳಲ್ಲಿ ಅವರು 7 ಶತಕ ಮತ್ತು 47 ಅರ್ಧಶತಕಗಳೊಂದಿಗೆ 7254 ರನ್ ಗಳಿಸಿದ್ದಾರೆ. ಕುಮಾರ್ ಸಂಗಕ್ಕಾರ (13341), ಎಂಎಸ್ ಧೋನಿ (10773) ಮತ್ತು ಆಡಮ್ ಗಿಲ್ಕ್ರಿಸ್ಟ್ (9410) ಮಾತ್ರ ಅವರಿಗಿಂತ ಮುಂದಿದ್ದಾರೆ.