* ಕೋಲ್ ಇಂಡಿಯಾದ ಮಾಜಿ ಮುಖ್ಯಸ್ಥ ಪ್ರಮೋದ್ ಅಗರ್ವಾಲ್ ಅವರನ್ನು ಬಾಂಬೆ ಸ್ಟಾಕ್ಸ್ ಎಕ್ಸ್‌ಚೇಂಜ್ (ಬಿಎಸ್‌ಇ) ಅಧ್ಯಕ್ಷರನ್ನಾಗಿ ನೇಮಿಸಲು ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅನುಮತಿ ನೀಡಿದೆ. * ಮಾರುಕಟ್ಟೆ ನಿಯಂತ್ರಕವು ಬಿಎಸ್‌ಇಯ ಅಧ್ಯಕ್ಷ ಮತ್ತು ಸಾರ್ವಜನಿಕ ಹಿತಾಸಕ್ತಿ ನಿರ್ದೇಶಕರಾಗಿ ಪ್ರಮೋದ್ ಅಗರವಾಲ್ ಅವರನ್ನು ನೇಮಕ ಮಾಡಲು ಅನುಮೋದಿಸಿದೆ ಎಂದು ವಿನಿಮಯ ಫೈಲಿಂಗ್‌ನಲ್ಲಿ ಹೂಡಿಕೆದಾರರಿಗೆ ತಿಳಿಸಲಾಗಿದೆ. * ಬಿಎಸ್‌ಇ ಮಂಡಳಿಯು ಡಿಸೆಂಬರ್ 13 ರಂದು ನೇಮಕಾತಿಯನ್ನು ಅನುಮೋದಿಸಿದ್ದರೆ, ಮಾರುಕಟ್ಟೆ ನಿಯಂತ್ರಕ ಡಿಸೆಂಬರ್ 26 ರಂದು ಅದರ ಅನುಮೋದನೆಯನ್ನು ನೀಡಿತು.* ಪ್ರಸ್ತುತ ಅಧ್ಯಕ್ಷರಾಗಿರುವ ಎಸ್.ಎಸ್.ಮುಂದ್ರಾ ಅವರ ಅಧಿಕಾರಾವಧಿಯು 2024ರ ಜನವರಿ 16ರಂದ ಮುಕ್ತಾಯಗೊಳ್ಳಲಿದೆ. ಅವರ ನಂತರ ಪ್ರಮೋದ್ ಅಗರ್ವಾಲ ಅವರು ಜನವರಿ 17, 2024 ರಂದು ಅಧಿಕಾರ ವಹಿಸಿಕೊಳ್ಳುತ್ತಾರೆ. * ಪ್ರಮೋದ್ ಅಗರ್ವಾಲ ಅವರು ಮಧ್ಯಪ್ರದೇಶ ಕೇಡರ್‌ನ ಮಾಜಿ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಯಾಗಿದ್ದರು ಬಳಿಕ ಮಧ್ಯಪ್ರದೇಶದಲ್ಲಿ ತಾಂತ್ರಿಕ ಶಿಕ್ಷಣ, ಕೌಶ ಅಭಿವೃದ್ಧಿ ಹಾಗೂ ಉದ್ಯೋಗ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾ ಸೇವೆ ಸಲ್ಲಿಸಿದ್ದಾರೆ.