* ಧೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಮತ್ತು ನಿರ್ದೇಶಕ ಗೋವರ್ಧನ ಅಸ್ರಾನಿ ಇಂದು ಮುಂಬೈ ನಲ್ಲಿ ನಿಧನರಾಗಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು.ನಟ ಅಸ್ರಾನಿ ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ.* 5 ದಶಕಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದ ಅಸ್ರಾನಿ 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.ಹಾಸ್ಯ ಪಾತ್ರಗಳಿಂದ ಅವರು ಜನಪ್ರಿಯತೆ ಗಳಿಸಿದ್ದರು.ಇವರು ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡಿದ್ದರು.* ಬಾಲಿವುಡ್ ನ ಜನಪ್ರಿಯ ಸಿನಿಮಾವಾದ ಶೋಲೆಯಲ್ಲಿ ಜೈಲರ ಪಾತ್ರ ಮಾಡಿದ್ದ ಗೋವರ್ಧನ ಅಸ್ರಾನಿ ಆ ಸಿನಿಮಾದಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದಾರೆ.ಹಾಗೆಯೇ ಹಲಾವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.* 1940  ರಲ್ಲಿ ಜೈಪುರದಲ್ಲಿ ಸಿಂಧಿ ಕುಟುಂಬದಲ್ಲಿ ಹುಟ್ಟಿದ ಗೋವರ್ಧನ ಅವರು ಅಸ್ರಾನಿ ಎಂದೇ ಜನಪ್ರಿಯರಾಗಿದ್ದರು.ಅವರ ತಂದೆ ಕಾರ್ಪೆಟ್ ಗಳನ್ನೂ ಮಾರುವ ಅಂಗಡಿ ಇಟ್ಟಿದ್ದರು.ವ್ಯವಹಾರದಲ್ಲಿ ಆಸಕ್ತಿ ತೋರದ ಇವರು ಅಭಿನಯದಲ್ಲಿ ಒಲವಿತ್ತು.ಪದವಿ ಮುಗಿದ ನಂತರ ಜೈಪುರ ಆಕಾಶ ವಾಣಿಯಲ್ಲಿ ಕಂಠದಾನ ಕಲಾವಿದರಾಗಿ ಪಳಗಿದ್ದರು.* ನಟಿ ಮಂಜು ಬನ್ಸಲ್ ಅವರನ್ನು ವಿವಾಹವಾಗಿದ್ದ ಅಸ್ರಾನಿ ಅವರಿಗೆ ನವೀನ ಎಂಬ ಮಗನಿದ್ದಾನೆ.* ಪುಣೆಯ "ಫಿಲಂ ಅಂಡ್ ಟೆಲಿವಿಷನ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ" ನಲ್ಲಿ 1964 ರಲ್ಲಿ ತರಬೇತಿ ಪಡೆದು ಹೊರಬಂದರು.1967 ರಲ್ಲಿ 'ಹರೇ ಕಾಂಚ ಕಿ ಚೂಡಿಯಾಂ'ಸೀಮಾದಲ್ಲಿ ನಟಿಸಿದ್ದರು.* ಫಿಲಂ ಫೇರ್ ಸೇರಿದಂತೆ ಕೆಲವು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಅಲ್ಲದೆ ಈ ನಟ ತಮ್ಮ ಹಾಸ್ಯವಲ್ಲರಿಯ 'ಟೈಮಿಂಗ್ 'ನಿಂದಾಗಿಯೇ ಪ್ರಸಿದ್ಧರಾಗಿದ್ದಾರೆ.* ಇವರು ಶೋಲೆ ಚಿತ್ರದ ವಿಲಕ್ಷಣ ಜೈಲರ ಪಾತ್ರದ ಮೂಲಕ ಸದಾ ಜೀವಂತ ಎಂದು ಭಾವನೆ ವ್ಯಕ್ತ ಪಡಿಸಿದ್ದಾರೆ.* 1976 ರಲ್ಲಿ ಅವರು ಅಭಿನಯಿಸಿದ ಶೋಲೆ ಚಿತ್ರದ ಜೈಲರ ಪಾತ್ರವಂತೂ ಅವರಿಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟಿದೆ.1985 ರಲ್ಲಿ ಪ್ರಸಾರವಾಗಿದ್ದ ದಾರಾವಾಹಿನಿಯಲ್ಲಿ ಕೂಡ ನಟನೆ ಮಾಡಿದ್ದಾರೆ.ಹಾಗೆಯೆ ಒಂದು ಚಿತ್ರ ರಂಗಕ್ಕೆ ತಮ್ಮ ದ್ವನಿಯನ್ನು ಕೊಟ್ಟಿದ್ದಾರೆ.