Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಬಾಲಿವುಡ್ನ ಶ್ರೇಷ್ಠ ಹಾಸ್ಯ ನಟ ಗೋವರ್ಧನ ಅಸ್ರಾನಿ ಇನ್ನಿಲ್ಲ
23 ಅಕ್ಟೋಬರ್ 2025
* ಧೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಮತ್ತು ನಿರ್ದೇಶಕ ಗೋವರ್ಧನ ಅಸ್ರಾನಿ ಇಂದು ಮುಂಬೈ ನಲ್ಲಿ ನಿಧನರಾಗಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು.ನಟ ಅಸ್ರಾನಿ ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ.
* 5 ದಶಕಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದ ಅಸ್ರಾನಿ 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.ಹಾಸ್ಯ ಪಾತ್ರಗಳಿಂದ ಅವರು ಜನಪ್ರಿಯತೆ ಗಳಿಸಿದ್ದರು.ಇವರು ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡಿದ್ದರು.
* ಬಾಲಿವುಡ್ ನ ಜನಪ್ರಿಯ ಸಿನಿಮಾವಾದ ಶೋಲೆಯಲ್ಲಿ ಜೈಲರ ಪಾತ್ರ ಮಾಡಿದ್ದ ಗೋವರ್ಧನ ಅಸ್ರಾನಿ ಆ ಸಿನಿಮಾದಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದಾರೆ.ಹಾಗೆಯೇ ಹಲಾವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
* 1940 ರಲ್ಲಿ ಜೈಪುರದಲ್ಲಿ ಸಿಂಧಿ ಕುಟುಂಬದಲ್ಲಿ ಹುಟ್ಟಿದ ಗೋವರ್ಧನ ಅವರು ಅಸ್ರಾನಿ ಎಂದೇ ಜನಪ್ರಿಯರಾಗಿದ್ದರು.ಅವರ ತಂದೆ ಕಾರ್ಪೆಟ್ ಗಳನ್ನೂ ಮಾರುವ ಅಂಗಡಿ ಇಟ್ಟಿದ್ದರು.ವ್ಯವಹಾರದಲ್ಲಿ ಆಸಕ್ತಿ ತೋರದ ಇವರು ಅಭಿನಯದಲ್ಲಿ ಒಲವಿತ್ತು.ಪದವಿ ಮುಗಿದ ನಂತರ ಜೈಪುರ ಆಕಾಶ ವಾಣಿಯಲ್ಲಿ ಕಂಠದಾನ ಕಲಾವಿದರಾಗಿ ಪಳಗಿದ್ದರು.
* ನಟಿ ಮಂಜು ಬನ್ಸಲ್ ಅವರನ್ನು ವಿವಾಹವಾಗಿದ್ದ ಅಸ್ರಾನಿ ಅವರಿಗೆ ನವೀನ ಎಂಬ ಮಗನಿದ್ದಾನೆ.
* ಪುಣೆಯ "ಫಿಲಂ ಅಂಡ್ ಟೆಲಿವಿಷನ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ" ನಲ್ಲಿ 1964 ರಲ್ಲಿ ತರಬೇತಿ ಪಡೆದು ಹೊರಬಂದರು.1967 ರಲ್ಲಿ 'ಹರೇ ಕಾಂಚ ಕಿ ಚೂಡಿಯಾಂ'ಸೀಮಾದಲ್ಲಿ ನಟಿಸಿದ್ದರು.
* ಫಿಲಂ ಫೇರ್ ಸೇರಿದಂತೆ ಕೆಲವು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಅಲ್ಲದೆ ಈ ನಟ ತಮ್ಮ ಹಾಸ್ಯವಲ್ಲರಿಯ 'ಟೈಮಿಂಗ್ 'ನಿಂದಾಗಿಯೇ ಪ್ರಸಿದ್ಧರಾಗಿದ್ದಾರೆ.
* ಇವರು ಶೋಲೆ ಚಿತ್ರದ ವಿಲಕ್ಷಣ ಜೈಲರ ಪಾತ್ರದ ಮೂಲಕ ಸದಾ ಜೀವಂತ ಎಂದು ಭಾವನೆ ವ್ಯಕ್ತ ಪಡಿಸಿದ್ದಾರೆ.
* 1976 ರಲ್ಲಿ ಅವರು ಅಭಿನಯಿಸಿದ ಶೋಲೆ ಚಿತ್ರದ ಜೈಲರ ಪಾತ್ರವಂತೂ ಅವರಿಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟಿದೆ.1985 ರಲ್ಲಿ ಪ್ರಸಾರವಾಗಿದ್ದ ದಾರಾವಾಹಿನಿಯಲ್ಲಿ ಕೂಡ ನಟನೆ ಮಾಡಿದ್ದಾರೆ.ಹಾಗೆಯೆ ಒಂದು ಚಿತ್ರ ರಂಗಕ್ಕೆ ತಮ್ಮ ದ್ವನಿಯನ್ನು ಕೊಟ್ಟಿದ್ದಾರೆ.
Take Quiz
Loading...