* ಭಾರತದ ಬಾಕ್ಸಿಂಗ್ ತಂಡವು ವಿಶ್ವ ಬಾಕ್ಸಿಂಗ್ ಕಪ್ ಬ್ರೆಜಿಲ್ 2025ರಲ್ಲಿ ತಮ್ಮ ಪ್ರಥಮ ಎಲಿಟ್ ಮಟ್ಟದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು, ಒಟ್ಟು ಆರು ಪದಕಗಳನ್ನು ಗಳಿಸಿದೆ. ಒಂದು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚುಗಳು.* ಹಿತೇಶ್ 70ಕೆಜಿ ವಿಭಾಗದಲ್ಲಿ ಪ್ರತಿಸ್ಪರ್ಧಿ ಇಂಗ್ಲೆಂಡಿನ ಓಡೆಲ್ ಕಾಮರಾ ಗಾಯಗೊಂಡ ಕಾರಣ ರಿಂಗ್ಗೆ ಬಂದಿರಲಿಲ್ಲ ಮತ್ತು ಹಿತೇಶ್ ಭಾರತದ ಪರವಾಗಿ ವಿಶ್ವ ಬಾಕ್ಸಿಂಗ್ ಕಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಬಾಕ್ಸರ್ ಎನಿಸಿಕೊಂಡರು.* 65ಕೆಜಿ ವಿಭಾಗದಲ್ಲಿ ಅಭಿನಾಶ್ ಜಮ್ವಾಲ್ ಬೆಳ್ಳಿ ಪದಕ ಗೆದ್ದರು.* ಜದುಮಣಿ ಸಿಂಗ್ ಮಂಡೆಂಗ್ಬಂ (50ಕೆಜಿ), ಮನೀಷ್ ರಾಠೋರ್ (55ಕೆಜಿ), ಸಚಿನ್ (60ಕೆಜಿ) ಮತ್ತು ವಿಷಾಲ್ (90ಕೆಜಿ) ತಲಾ ಕಂಚು ಪದಕ ಪಡೆದರು.* ಹಿತೇಶ್, ಸ್ಪರ್ಧೆಗೆ ಮೊದಲು ಬ್ರೆಜಿಲ್ನಲ್ಲಿ ನಡೆದ 10 ದಿನಗಳ ಶಿಬಿರವು ತನ್ನ ಗೆಲುವಿಗೆ ಸಹಕಾರಿಯಾದ್ದೆಂದು ಹೇಳಿದ್ದಾರೆ. ಈ ಸ್ಪರ್ಧೆಯು ತಂಡಕ್ಕೆ ಉತ್ತಮ ಅನುಭವವನ್ನು ನೀಡಿದೆ ಎಂದೂ ಅವರು ಹೇಳಿದ್ದಾರೆ.* ಪ್ಯಾರಿಸ್ ಒಲಿಂಪಿಕ್ಸ್ ನಂತರ ಭಾರತದ ಮೊದಲ ಪ್ರಮುಖ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ 10 ಸದಸ್ಯರ ತಂಡ ಭಾಗವಹಿಸಿತ್ತು.