* ಎರಡು ಬಾರಿಯ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್, ಅಮೆರಿಕದ ಜಾರ್ಜ್ ಫೋರ್ಮನ್ ಶುಕ್ರವಾರ(ಮಾರ್ಚ್ 21) ರಾತ್ರಿ ತವರುನೆಲದಲ್ಲಿ ನಿಧನ ಹೊಂದಿದರು.* ಜಾರ್ಜ್ ಫೋರ್ಮನ್(76), 1974ರ ಐತಿಹಾಸಿಕ “ರಂಬಲ್ ಇನ್ ಜಂಗಲ್’ ಸ್ಪರ್ಧೆಯಲ್ಲಿ ದಿಗ್ಗಜ ಮೊಹಮ್ಮದ್ ಅಲಿ ವಿರುದ್ಧ ಹೋರಾಡಿ ಸೋತಿದ್ದರು.* ಒಲಿಂಪಿಕ್ ಸ್ವರ್ಣಪದಕ ವಿಜೇತರಾಗಿದ್ದ ಫೋರ್ಮನ್ 81 ಸೆಣಸಾಟಗಳಲ್ಲಿ 76 ಜಯಗಳಿಸಿದ್ದು, 68 ನಾಕೌಟ್ಗಳಿದ್ದರು. ಕ್ರೀಡೆಯ ಹೊರಗೂ ಅವರು ಸೆಲೆಬ್ರಿಟಿಯಾಗಿ ಖ್ಯಾತಿ ಪಡೆದರು. 1973ರಲ್ಲಿ ಹೆವಿವೇಟ್ ಪ್ರಶಸ್ತಿ ಜಯಿಸಿದ್ದರು.* 1977ರಲ್ಲಿ ನಿವೃತ್ತಿ ಹೊಂದಿ, 1987ರಲ್ಲಿ ಮರಳಿ ಬಾಕ್ಸಿಂಗ್ಗೆ ಬಂದರು. 1994ರಲ್ಲಿ 45ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಆಗಿ ದಾಖಲೆಯನ್ನೇರಿಸಿದರು. 1997ರಲ್ಲಿ ಅಂತಿಮವಾಗಿ ನಿವೃತ್ತರಾದರು.* ಉದ್ಯಮಿಯಾಗಿ ಗುರುತಿಸಿಕೊಂಡರು. ನಾಲ್ಕು ಮದುವೆ, ಹತ್ತು ಮಕ್ಕಳನ್ನು ಹೊಂದಿದ್ದರು.