Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಬಾಹ್ಯಾಕಾಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ: 25 ವರ್ಷಗಳಲ್ಲೇ ಮೊದಲ ಬಾರಿಗೆ ನಾಸಾದಿಂದ ‘ಕ್ರೂ-11’ ಕಾರ್ಯಾಚರಣೆ ಅವಧಿಗೆ ಮುನ್ನವೇ ಅಂತ್ಯ!
12 ಜನವರಿ 2026
➤
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಗನಯಾತ್ರಿಯೊಬ್ಬರ ವೈದ್ಯಕೀಯ ಸಮಸ್ಯೆಯ ಕಾರಣದಿಂದ ಇಡೀ ಮಿಷನ್ ಅನ್ನು ನಿಗದಿತ ಅವಧಿಗಿಂತ ಒಂದು ತಿಂಗಳು ಮುಂಚಿತವಾಗಿ ಕೊನೆಗೊಳಿಸಲು ನಾಸಾ (NASA) ನಿರ್ಧರಿಸಿದೆ.
ಕ್ರೂ-11 (Crew-11)
ತಂಡದ ನಾಲ್ವರು ಸದಸ್ಯರು ಜನವರಿ 14, 2026ರಂದು ಭೂಮಿಗೆ ಮರಳಲಿದ್ದಾರೆ.
ಜೂನ್ 2025ರಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಕ್ರೂ-11 ತಂಡವು ಫೆಬ್ರವರಿ ಅಂತ್ಯದವರೆಗೆ ISS ನಲ್ಲಿ ಉಳಿಯಬೇಕಿತ್ತು. ಆದರೆ, ಕಳೆದ ವಾರ ತಂಡದ ಒಬ್ಬ ಅಂತರಿಕ್ಷಯಾತ್ರಿಯಲ್ಲಿ ಕಾಣಿಸಿಕೊಂಡ ವೈದ್ಯಕೀಯ ಸಮಸ್ಯೆಯಿಂದಾಗಿ ಜನವರಿ 8ರಂದು ನಡೆಯಬೇಕಿದ್ದ ಬಾಹ್ಯಾಕಾಶ ನಡಿಗೆಯನ್ನು (Spacewalk) ರದ್ದುಗೊಳಿಸಲಾಗಿತ್ತು. ಈಗ ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ತಂಡವನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ.
➤
ನಾಸಾ ನೀಡಿರುವ ಮಾಹಿತಿ ಪ್ರಕಾರ,
ಬುಧವಾರ (January-14)ಸಂಜೆ 5 ಗಂಟೆ (ಅಮೆರಿಕದ ಪೂರ್ವ ಕಾಲಮಾನ – ET) ನಂತರ
ಕ್ರೂ–11 ಯಾನವು ISS ನಿಂದ ಬೇರ್ಪಡುವ ಸಾಧ್ಯತೆ ಇದೆ. ಕ್ಯಾಲಿಫೋರ್ನಿಯಾ ಕರಾವಳಿಯ ಸಮುದ್ರ ಪ್ರದೇಶದಲ್ಲಿ ಇಳಿಯುವ ಸ್ಥಳದ ಹವಾಮಾನ ಅನುಕೂಲಕರವಾಗಿದ್ದರೆ ಈ ಕಾರ್ಯಾಚರಣೆ ನಡೆಯಲಿದೆ.
➤
ಈ ವಾರ ಆರಂಭದಲ್ಲಿ ಕ್ರೂ–11 ತಂಡದ ಒಬ್ಬ ಅಂತರಿಕ್ಷಯಾತ್ರಿ ವೈದ್ಯಕೀಯ ಸಮಸ್ಯೆ ಅನುಭವಿಸಿದ್ದಾರೆ. ಆದರೆ ವೈದ್ಯಕೀಯ ಗೌಪ್ಯತೆಯ ಕಾರಣದಿಂದ ಸಮಸ್ಯೆಯ ವಿವರಗಳು ಹಾಗೂ ಅಂತರಿಕ್ಷಯಾತ್ರಿಯ ಗುರುತು ಪ್ರಕಟಿಸಲಾಗಿಲ್ಲ. ನಾಸಾ ಅಧಿಕಾರಿಗಳ ಪ್ರಕಾರ, ಪರಿಸ್ಥಿತಿ ಸ್ಥಿರವಾಗಿದ್ದು ಇದು ತುರ್ತು ಸ್ಥಳಾಂತರವಲ್ಲ; ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ
➤
ನಾಸಾ ಆಡಳಿತಾಧಿಕಾರಿ
ಜಾರೆಡ್ ಐಸಾಕ್ಮ್ಯಾನ್
ಅವರು ಮಾತನಾಡಿ, ಅಂತರಿಕ್ಷಯಾತ್ರಿಗಳ ಸುರಕ್ಷತೆ ದೃಷ್ಟಿಯಿಂದ ಕ್ರೂ–11 ತಂಡವನ್ನು ಯೋಜಿತ ಅವಧಿಗೆ ಮುನ್ನವೇ ಭೂಮಿಗೆ ಕರೆತರುವುದೇ ಒಳಿತೆಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
➤
ಭೂಮಿಗೆ ಮರಳಲಿರುವ ಕ್ರೂ–11 ಸದಸ್ಯರು:
=>
ನಾಸಾ ಅಂತರಿಕ್ಷಯಾತ್ರಿಗಳು:
ಝೇನಾ ಕಾರ್ಡ್ಮನ್
,
ಮೈಕ್ ಫಿಂಕೆ
=>
ಜಪಾನ್ ಅಂತರಿಕ್ಷಯಾತ್ರಿ:
ಕಿಮಿಯಾ ಯುಯಿ
=>
ರಷ್ಯಾ ಕೋಸ್ಮೋನಾಟ್:
ಒಲೆಗ್ ಪ್ಲಾಟೋನೋವ್
ಈ ತಂಡವು
2025ರ ಆಗಸ್ಟ್ ಆರಂಭದಲ್ಲಿ ISS ಗೆ ಆಗಮಿಸಿದ್ದು
, ಮೂಲತಃ
ಫೆಬ್ರವರಿ ಅಂತ್ಯದವರೆಗೆ
ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಬೇಕಾಗಿತ್ತು.
Take Quiz
Loading...