* ಬಾಹ್ಯಾಕಾಶ ಕ್ಷೇತ್ರದಲ್ಲಿ ಲಿಂಗ ವೈವಿಧ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸ್ಕೈರೂಟ್ ಏರೋಸ್ಪೇಸ್ 'ಕಲ್ಪನಾ ಫೆಲೋಶಿಪ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. * ಈ ಹೊಸ ಕಾರ್ಯಕ್ರಮವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳಾ ಇಂಜಿನಿಯರ್‌ಗಳನ್ನು ಸಬಲೀಕರಣಗೊಳಿಸಲು ಮೀಸಲಾಗಿರುವ ಭಾರತದ ಮೊದಲ 'ಕಲ್ಪನಾ ಫೆಲೋಶಿಪ್' ಆಗಿದೆ.* ದಿವಂಗತ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರನ್ನು ಗೌರವಿಸುವ ಸಲುವಾಗಿ ಹೆಸರಿಸಲಾದ ಕಲ್ಪನಾ ಫೆಲೋಶಿಪ್ ಅನ್ನು ಬಾಹ್ಯಾಕಾಶ ಉದ್ಯಮದಲ್ಲಿ ಮುಂದಿನ ಪೀಳಿಗೆಯ ಮಹಿಳಾ ಪ್ರತಿಭೆಗಳನ್ನು ಪೋಷಿಸಲು ಈ ಉಪಕ್ರಮ ಸಹಾಯಕವಾಗಿದೆ.* ಮಹಿಳಾ ಎಂಜಿನಿಯರ್ ಗಳು ಬಾಹ್ಯಾಕಾಶ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು ಉನ್ನತ ತಜ್ಞರಿಂದ ಮಾರ್ಗದರ್ಶನ ಮತ್ತು ವಿಶ್ವದರ್ಜೆಯ ಮೂಲಸೌಕರ್ಯಗಳನ್ನ ಪಡೆಯಲು ಕಲ್ಪನಾಫೆಲೋಷಿಪ್ ಸಹಾಯವಾಗಿದೆ ಎಂದು ಸ್ಕೈರೂಟ್ ನ ಸಹ ಸಂಸ್ಥಾಪಕರು ಮತ್ತು CEO ಪವನ್ ಚಂದನಾ ಅವರು ತಿಳಿಸಿದ್ದಾರೆ.