* ಸೋಮವಾರ (ಜ.22) ರಂದು ಅಭಿಜಿತ್ ಮುಹೂರ್ತದಲ್ಲಿ ಮಧ್ಯಾಹ್ನ 12.20ಕ್ಕೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯೆಯು ಸಡಗರದಿಂದ ಸಜ್ಜಾಗಿದೆ, ಸಂಭ್ರಮ ಮನೆ ಮಾಡಿದೆ.*  ಇಡೀ ವಿಶ್ವದ ಚಿತ್ರ ಅಯೋಧ್ಯೆಯತ್ತ ನೆಟ್ಟಿದ್ದು, 500 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದ್ದು ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮ ವಿಗ್ರಹ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಷ್ಟ್ರದ ಗಣ್ಯರು, ಸ್ವಾಮೀಜಿಗಳು, ಯತಿಗಳು, ಆದಿವಾಸಿಗಳು ಸಾಕ್ಷಿಯಾಗಲಿದ್ದಾರೆ.* ಇಂದು (ಜ.22)ಸರ್ವಾರ್ಥ ಸಿದ್ದಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ರವಿ ಯೋಗ ಎಂಬ ಮೂರು ಯೋಗಗಳು ರೂಪುಗೊಳ್ಳುತ್ತಿವೆ. ಶ್ರೀರಾಮನು ಈ ಯೋಗದಲ್ಲಿಯೇ ಜನಿಸಿದ್ದಾನೆ ಎಂದು ನಂಬಲಾಗಿದ್ದು, ಪಂಚಾಂಗದ ಪ್ರಕಾರ ಇದೇ ಮೂಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಗುತ್ತಿದೆ. * ರಾಮನ ಊರಿನ ఎల్ల ಬೀದಿಗಳು, ಗಲ್ಲಿಗಳು ಹೂವುಗಳಿಂದ ಅಲಂಕೃತಗೊಂಡಿವೆ. ಬಿಲ್ಲು-ಬಾಣ ಹಿಡಿದಿರುವ ರಾಮನ ಚಿತ್ರವನ್ನು, ರಾಮಚರಿತ ಮಾನಸದ ಸಾಲುಗಳನ್ನು ನಗರದ ಗೋಡೆಗಳ ಮೇಲೆ ಬರೆಯಲಾಗಿದೆ. ರಾಮಚರಿತಮಾನಸದ ಸಾಲುಗಳ ಪಠಣವು ಇಲ್ಲಿನ ಅಂಗಡಿಗಳು, ದೇವಸ್ಥಾನಗಳು ಹಾಗೂ ಮನೆ ಗಳಿಗೆ ಅಳವಡಿಸಲಾಗಿರುವ ಧ್ವನಿ ವರ್ಧಕಗಳಿಂದ ಕೇಳಿಸುತ್ತಿದೆ.* ಪ್ರಧಾನಿ ನರೇಂದ್ರ ಮೋದಿ, ಸಾಧುಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸುಮಾರು 8 ಸಾವಿರ ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.* ಭಾರತದಲ್ಲಿ ಅಪಾರ ಧಾರ್ಮಿಕ ಪ್ರಾಮುಖ್ಯತೆಯ ತಾಣವಾದ ಅಯೋಧ್ಯೆ ರಾಮ ಮಂದಿರವು, ರಾಮ್ ಲಲ್ಲಾ ದೇವರಿಗಾಗಿ ಸೌರಶಕ್ತಿ ಚಾಲಿತ "ಸೂರ್ಯ ತಿಲಕ" ಒಂದು ಅದ್ಭುತ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಉಪಕ್ರಮವು, ಆಧ್ಯಾತ್ಮಿಕತೆಯನ್ನು ವೈಜ್ಞಾನಿಕ ನಾವೀನ್ಯತೆಯೊಂದಿಗೆ ಸಂಯೋಜಿಸುವುದು, ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಸುಸ್ಥಿರ ಆಚರಣೆಗಳಿಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.* "ಸೂರ್ಯ ತಿಲಕ" ಎಂಬುದು ಭಗವಾನ್ ರಾಮನ ವಿಗ್ರಹದ ಹಣೆಯನ್ನು 'ತಿಲಕ' (ಹಣೆಯ ಮೇಲೆ ಧರಿಸಿರುವ ಸಾಂಪ್ರದಾಯಿಕ ಹಿಂದೂ ಗುರುತು) ರೂಪದಲ್ಲಿ ಸೂರ್ಯನ ಬೆಳಕಿನಿಂದ ಅಲಂಕರಿಸಲು ವಿನ್ಯಾಸಗೊಳಿಸಲಾದ ಒಂದು ಚತುರ ವ್ಯವಸ್ಥೆಯಾಗಿದೆ. ಈ ವಿಶಿಷ್ಟ ವೈಶಿಷ್ಟ್ಯವನ್ನು ಭಗವಾನ್ ರಾಮನ ಜನ್ಮವನ್ನು ಗುರುತಿಸುವ ವಾರ್ಷಿಕ ರಾಮ ನವಮಿ ಆಚರಣೆಗಾಗಿ ಪ್ರತ್ಯೇಕವಾಗಿ ಯೋಜಿಸಲಾಗಿದೆ.* ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಜ್ಜುಗೊಂಡಿರುವ ಇಂದಿನ (ಜ.22) ಕಾರ್ಯಕ್ರಮಗಳು : • ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡು ಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ.  • ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ• ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ• ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಅವಾಹನೆ ಮಾಡುತ್ತಾರೆ • ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ• ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿಧ್ವಂಸರು, ಅಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ• ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ, ಅಯೋಧ್ಯೆಯಲ್ಲಿ ಸೋಮವಾರ (ಜ.22) ಸಂಜೆ ದೀಪೋತ್ಸವ ನಡೆಯಲಿದೆ. ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬಳಸಿ ದೀಪ ಬೆಳಗಿಸಲಾಗುತ್ತದೆ.* ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ 'ಯಜಮಾನ'ರಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಲಿಂಗರಾಜ ಬಸವರಾಜ ಅವರು ಯಜಮಾನರಾಗಿ ಪತ್ನಿಯೊಂದಿಗೆ ಭಾಗಿಯಾ ಗಲಿದ್ದಾರೆ.