Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ATP ರ್ಯಾಂಕಿಂಗ್ 2026: ಅಲ್ಕರಾಜ್ ನಂ.1; ಟಾಪ್ 20ರಲ್ಲಿ ಭಾರತದ ಯುಕಿ ಭಾಂಬ್ರಿ ಸಾಧನೆ
Authored by:
Akshata Halli
Date:
4 ಫೆಬ್ರುವರಿ 2026
➤ ಮೆಲ್ಬರ್ನ್ನಲ್ಲಿ ನಡೆದ 2026ರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ನ ಯುವ ತಾರೆ
ಕಾರ್ಲೋಸ್ ಅಲ್ಕರಾಜ್
ಐತಿಹಾಸಿಕ ಸಾಧನೆ ಮಾಡಿದ್ದಾರೆ. ಫೈನಲ್ನಲ್ಲಿ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ ಚೊಚ್ಚಲ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದ ಅಲ್ಕರಾಜ್,
'ಕೆರಿಯರ್ ಗ್ರಾನ್ ಸ್ಲಾಮ್'
ಪೂರ್ಣಗೊಳಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಗೆಲುವಿನೊಂದಿಗೆ ಮಂಗಳವಾರ( 03-02-2026) ಪ್ರಕಟಗೊಂಡ ಎಟಿಪಿ ರ್ಯಾಂಕಿಂಗ್ನಲ್ಲಿ ಅವರು ತಮ್ಮ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ಬೆಲರೂಸ್ನ
ಅರಿನಾ ಸಬಲೆಂಕಾ
ಅವರು ತಮ್ಮ ಅಗ್ರ ಶ್ರೇಯಾಂಕವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
➤
ನೊವಾಕ್ ಜೊಕೊವಿಚ್ ದಾಖಲೆ:
ಸೋಲಿನ ಹೊರತಾಗಿಯೂ, ಜೊಕೊವಿಚ್ ಅವರು ಒಂದು ಸ್ಥಾನದ ಬಡ್ತಿಯೊಂದಿಗೆ
3ನೇ ಶ್ರೇಯಾಂಕಕ್ಕೆ
ಏರಿದ್ದಾರೆ. ಆಗಸ್ಟ್ 2024ರ ನಂತರ ಅವರು ಮೊದಲ ಬಾರಿಗೆ ಟಾಪ್-3 ಪಟ್ಟಿಗೆ ಮರಳಿದ್ದಾರೆ.
➤
ಮಹಿಳೆಯರ ವಿಭಾಗ (WTA):
ಬೆಲರೂಸ್ನ
ಅರಿನಾ ಸಬಲೆಂಕಾ
ಫೈನಲ್ನಲ್ಲಿ ಎಲೆನಾ ರೈಬಾಕಿನಾ ವಿರುದ್ಧ ಸೋತರೂ, ವಿಶ್ವದ
ನಂ.1
ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಶಸ್ತಿ ಗೆದ್ದ ಕಜಕಸ್ತಾನದ
ಎಲೆನಾ ರೈಬಾಕಿನಾ
3ನೇ ಸ್ಥಾನಕ್ಕೆ ಜಿಗಿದಿದ್ದಾರೆ.
➤ ಭಾರತದ ಟೆನಿಸ್ ಲೋಕಕ್ಕೆ ಹೆಮ್ಮೆಯ ವಿಷಯವೆಂದರೆ, ಅನುಭವಿ ಡಬಲ್ಸ್ ಆಟಗಾರ
ಯುಕಿ ಭಾಂಬ್ರಿ
ಅವರು ಎಟಿಪಿ ಡಬಲ್ಸ್ ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ
18ನೇ ಸ್ಥಾನಕ್ಕೇರಿದ್ದಾರೆ.
*
ದಾಖಲೆ:
ದಿಗ್ಗಜ ರೋಹನ್ ಬೋಪಣ್ಣ ಅವರ ನಂತರ ವಿಶ್ವದ ಅಗ್ರ 20ರ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಂಬ್ರಿ ಪಾತ್ರರಾಗಿದ್ದಾರೆ. ಕನ್ನಡಿಗ ರೋಹನ್ ಬೋಪಣ್ಣ ಅವರು ಇತ್ತೀಚೆಗೆ ನಿವೃತ್ತಿ ಘೋಷಿಸಿದ ನಂತರ, ಯುಕಿ ಭಾಂಬ್ರಿ ಭಾರತದ ನಂ.1 ಡಬಲ್ಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Take Quiz
Loading...