* ನಾಸಾದಲ್ಲಿ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಿರಿಯ ಗಗನಯಾನಿ ಡಾನ್ ಪೆಟಿಟ್ ಅವರು ತಮ್ಮ 70ನೇ ಹುಟ್ಟುಹಬ್ಬದಂದು, ಭಾನುವಾರ (ಏಪ್ರಿಲ್ 20) ಭೂಮಿಗೆ ಹಿಂದಿರುಗಿದ್ದಾರೆ.* ಕಳೆದ 7 ತಿಂಗಳುಗಳಿಂದ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್) ದಲ್ಲಿ ಸೇವೆ ನಿರ್ವಹಿಸುತ್ತಿದ್ದರು.* ಅಮೆರಿಕದ ಪೆಟಿಟ್ ಹಾಗೂ ರಷ್ಯಾದ ಇಬ್ಬರು ಗಗನಯಾತ್ರಿಗಳನ್ನು ಹೊತ್ತ ಸೊಯುಜ್ ಬಾಹ್ಯಾಕಾಶ ನೌಕೆ ಕಜಕಿಸ್ತಾನದ ಝಜ್ ಕಾಜ್ಜನ್ ಎಂಬ ನಿರ್ಜನ ಪ್ರದೇಶದಲ್ಲಿ ಭದ್ರವಾಗಿ ಇಳಿದಿದೆ.* ಬಾಹ್ಯಾಕಾಶದಲ್ಲಿ ಒಟ್ಟು 220 ದಿನಗಳನ್ನು ಕಳೆಯುವ ಮೂಲಕ ಪೆಟಿಟ್ ಅವರು ತಮ್ಮ ಸಹಯಾತ್ರಿಗಳೊಂದಿಗೆ 3,520 ಬಾರಿ ಭೂಮಿಗೆ ಸುತ್ತು ಹಾಕಿದ್ದಾರೆ. ಅವರು ಕಳೆದ 29 ವರ್ಷಗಳಿಂದ ನಾಸಾದ ಗಗನಯಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.* ಕಜಕಿಸ್ತಾನದಿಂದ ಅವರು ನಾಸಾದ ವಿಶೇಷ ವಿಮಾನದ ಮೂಲಕ ಅಮೆರಿಕದ ಟೆಕ್ಸಾಸ್ನಲ್ಲಿ ಇರುವ ಜಾನ್ಸನ್ ಸ್ಪೇಸ್ ಸೆಂಟರ್ಗೆ ತಲುಪಿದ್ದಾರೆ.* ಐಎಸ್ಎಸ್ನಲ್ಲಿ ಪೆಟಿಟ್ ಅವರು ಸಸ್ಯಗಳ ಬೆಳವಣಿಗೆ, ನೀರಿನ ಶುದ್ಧೀಕರಣ ತಂತ್ರಜ್ಞಾನ ಹಾಗೂ ಮೈಕ್ರೋಗ್ರಾವಿಟಿಯಲ್ಲಿ ಅಗ್ನಿಯ ಹರಿವಿನ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿದ್ದಾರೆ.