* ಅಸ್ಸಾಂ ಸರ್ಕಾರ ಗಡಿಯಲ್ಲಿ ಒಳನುಸುಳುವಿಕೆ ಮೇಲಿನ ಕಣ್ಗಾವಲು, ವಿಪತ್ತು ನಿರ್ವಹಣೆ ಮತ್ತಿತರ ಉದ್ದೇಶಗಳಿಗೆ ತನ್ನದೇ ಆದ ಉಪಗ್ರಹವನ್ನು ಉಡಾಯಿಸಲು ತೀರ್ಮಾನಿಸಿದೆ.* ಈ ಕುರಿತು ಇಸ್ರೋದೊಂದಿಗೆ ಮಾತುಕತೆ ನಡೆಯುತ್ತಿದ್ದು, ಇದರ ಇದರೊಂದಿಗೆ ರಾಜ್ಯವು ದೇಶದ ಮೊದಲ ಉಪಗ್ರಹ ಹೊಂದುವ ಏಕೈಕ ರಾಜ್ಯವಾಗಿ ಗುರುತಿಸಲಾದೆ.* ವಿತ್ತ ಸಚಿವ ಅಂಜನಾ ನಿಯೋಗ್ ಸೋಮವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್‌ನಲ್ಲಿ ಉಪಗ್ರಹ ಹೊಂದುವ ಬಗ್ಗೆ ಉಲ್ಲೇಖಿಸಲಾಗಿದೆ. ಉದ್ದೇಶಿತ ಉಪಗ್ರಹಕ್ಕೆ “ಅಸ್ಸಾಂಸ್ಯಾಟ್’ ಎಂಬ ಹೆಸರು ಇರಿಸುವ ಉದ್ದೇಶವಿದೆ. ಕೇಂದ್ರ ಸರ್ಕಾರ ಮತ್ತು ಇನ್-ಸ್ಪೇಸ್ ಸಹಭಾಗಿತ್ವದಲ್ಲಿ ಉಪಗ್ರಹ ಉಡಾವಣೆಗಾಗಿ ಮಾತುಕತೆ ನಡೆಯುತ್ತಿದೆ.* ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ರಾಜ್ಯಕ್ಕೆ ಪ್ರತ್ಯೇಕ ಉಪಗ್ರಹ ಉಡಾವಣೆ ಪ್ರಸ್ತಾಪವನ್ನು ಸಮರ್ಥಿಸಿದರು. ಜನವರಿಯಲ್ಲಿ ಉಮರಾಂಗ್ಸೋ ಕಲ್ಲಿದ್ದಲು ಗಣಿಯಲ್ಲಿ ನಡೆದ ದುರಂತದ ತನಿಖೆಗೆ 45 ದಿನಗಳ ಸಮಯ ತೆಗೆದುಕೊಂಡ ಕಾರಣ, ಸೂಕ್ಷ್ಮ ಮತ್ತು ತ್ವರಿತ ಮಾಹಿತಿಗಾಗಿ ರಾಜ್ಯದ ಸ್ವಂತ ಉಪಗ್ರಹ ಅಗತ್ಯವಿದೆ ಎಂದು ಅವರು ತಿಳಿಸಿದರು.* ಅಸ್ಸಾಂ ಸರ್ಕಾರ ಉಪಗ್ರಹದ ಮಾಹಿತಿಯನ್ನು ಆಧರಿಸಿ ವಿಪತ್ತು ನಿರ್ವಹಣೆ, ಕೃಷಿ, ಮೂಲಸೌಕರ್ಯ, ಗಡೀ ನಿಗಾ, ಒಳನುಸುಳುವಿಕೆ ತಡೆ ಹಾಗೂ ಸಮಾಜ-ಆರ್ಥಿಕ ಯೋಜನೆಗಳ ಜಾರಿಗೆ ವಿಶ್ವಾಸ ಹೊಂದಿದೆ. ಆದರೆ, ಅಗತ್ಯವಿರುವ ಮೊತ್ತವನ್ನು ಪ್ರಕಟಿಸಿಲ್ಲ.* 2025-26 ಬಜೆಟ್‌ನಲ್ಲಿ ಉಪಗ್ರಹ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳ ಉತ್ತೇಜನಕ್ಕೆ ವಿಶೇಷ ಅನುದಾನ ಮೀಸಲಿದ್ದು, ಸಂವಹನ, ಹವಾಮಾನ ನಿರೀಕ್ಷಣೆ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಬೆಂಬಲ ನೀಡಲಿದೆ. ಖಾಸಗಿ ಸಂಸ್ಥೆಗಳು ಮತ್ತು ಸ್ಟಾರ್ಟ್ಅಪ್‌ಗಳಿಗೆ ಹೂಡಿಕೆ ಪ್ರೋತ್ಸಾಹಿಸಲಾಗಿದ್ದು, ಉದ್ಯಮಶೀಲತೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆಯಿದೆ.