* ಆಸಿಯಾನ್-ಭಾರತ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು (ಅಕ್ಟೋಬರ್ 26) ಲಾವೋಸ್‌ಗೆ ಎರಡು ದಿನಗಳ ಭೇಟಿಗಾಗಿ ತೆರಳಿದ್ದಾರೆ.* ಪ್ರಧಾನಮಂತ್ರಿಯವರ ಈ ಭೇಟಿಯು ಆಸಿಯಾನ್ ರಾಷ್ಟ್ರಗಳೊಂದಿಗೆ ದೇಶದ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲಿದೆ. ಆಗಮನದ ನಂತರ ಭಾರತೀಯ ವಲಸಿಗರು ಮೋದಿಯವರನ್ನು ಸ್ವಾಗತಿಸಿದರು.* 21 ನೇ ಆಸಿಯಾನ್-ಭಾರತ ಮತ್ತು 19 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಲಾವೊ ಪಿಡಿಆರ್‌ಗೆ ಹೊರಟಿದ್ದೇನೆ. ನಮ್ಮ ಆಕ್ಟ್ ಈಸ್ಟ್ ನೀತಿಯ ಒಂದು ದಶಕವನ್ನು ಗುರುತಿಸುತ್ತಿರುವುದರಿಂದ ಇದು ವಿಶೇಷ ವರ್ಷವಾಗಿದೆ, ನಮ್ಮ ರಾಷ್ಟ್ರಕ್ಕೆ ಗಣನೀಯ ಪ್ರಯೋಜನಗಳನ್ನು ನೀಡಲಿದೆ. ಈ ಭೇಟಿಯ ಸಮಯದಲ್ಲಿ ವಿವಿಧ ದ್ವಿಪಕ್ಷೀಯ ಸಭೆಗಳು ಮತ್ತು ವಿವಿಧ ವಿಶ್ವ ನಾಯಕರೊಂದಿಗೆ ಸಂವಾದಗಳು ಸಹ ನಡೆಯಲಿವೆ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.* ASEAN ದೇಶಗಳೊಂದಿಗೆ ಭಾರತಕ್ಕೆ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು ಒಂದು ಪ್ರಮುಖ ಉದ್ದೇಶವಾಗಿದೆ . ಭಾರತವು ಲಾವೋಸ್‌ನೊಂದಿಗೆ ನಿಕಟ, ಸೌಹಾರ್ದ, ಐತಿಹಾಸಿಕ ಮತ್ತು ನಾಗರೀಕ ಸಂಬಂಧವನ್ನು ಹೊಂದಿದೆ,*  ಈ ಶೃಂಗಸಭೆ ಸಾಂಸ್ಕೃತಿಕ ತಾಣಗಳ ಮರುಸ್ಥಾಪನೆ, ಸಾಮರ್ಥ್ಯ ನಿರ್ಮಾಣ ಮತ್ತು ವಿದ್ಯುತ್ ಯೋಜನೆಗಳಂತಹ ವಿವಿಧ ಕ್ಷೇತ್ರಗಳನ್ನು ಒಳಗೊಂಡಿದೆ ಎಂದುವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಜೈದೀಪ್ ಮಜುಂದಾರ್ ಅವರು ಹೇಳಿದರು.