Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಅರುಣಾಚಲ ಪ್ರದೇಶದ ಕೀ ಪಾನ್ಯೋರ್: ಭಾರತದ ಮೊದಲ ಬಯೋ–ಹ್ಯಾಪಿ ಜಿಲ್ಲೆ
9 ಜನವರಿ 2026
➤
ಅರುಣಾಚಲ ಪ್ರದೇಶದ
ಕೀ ಪಾನ್ಯೋರ್ ಜಿಲ್ಲೆ
ಯನ್ನು ಭಾರತದ
ಮೊದಲ ಬಯೋ–ಹ್ಯಾಪಿ ಜಿಲ್ಲೆ
ಯಾಗಿ ಘೋಷಿಸಲಾಗಿದ್ದು, ಇದು ಜೀವವೈವಿಧ್ಯಾಧಾರಿತ ಸುಸ್ಥಿರ ಅಭಿವೃದ್ಧಿಗೆ ಮಾದರಿಯಾಗಿದೆ.
ಬಯೋ–ಹ್ಯಾಪಿನೆಸ್
ಎಂಬುದು ಮಾನವರು ಮತ್ತು ಪ್ರಕೃತಿ ನಡುವಿನ ಸಮನ್ವಯ ಸಹಬಾಳ್ವೆಯಿಂದ ಉದ್ಭವಿಸುವ ಸಮಗ್ರ ಸುಖಸ್ಥಿತಿಯನ್ನು ಸೂಚಿಸುವ ಕಲ್ಪನೆ. ಇದು ಕೇವಲ ಆದಾಯ ಅಥವಾ GDP ಆಧಾರಿತ ಅಭಿವೃದ್ಧಿಗಿಂತಲೂ, ಮಾನವ ಕಲ್ಯಾಣ, ಪರಿಸರ ಸಮತೋಲನ ಮತ್ತು ಜೀವವೈವಿಧ್ಯ ಸಂರಕ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡ ಅಭಿವೃದ್ಧಿ ಮಾದರಿಯಾಗಿದೆ.
➤
ಈ ಉಪಕ್ರಮದ ಪ್ರಮುಖ ಸ್ತಂಭಗಳು (Key Pillars):
1. ಕೃಷಿ-ಜೀವವೈವಿಧ್ಯದ ಸಂರಕ್ಷಣೆ:
ಕೃಷಿ ವೈವಿಧ್ಯತೆಯನ್ನು ಕಾಪಾಡುವುದು ಮತ್ತು ಅದರ ಸುಸ್ಥಿರ ಬಳಕೆ.
2. ಜೀವನೋಪಾಯದ ವೈವಿಧ್ಯೀಕರಣ:
ಬುಡಕಟ್ಟು ಮತ್ತು ಸ್ಥಳೀಯ ಸಮುದಾಯಗಳಿಗೆ ಕೇವಲ ಕೃಷಿಯಲ್ಲದೆ ಇತರೆ ಆದಾಯದ ಮೂಲಗಳನ್ನು ಒದಗಿಸುವುದು.
3. ಸಮಗ್ರ ವಿಧಾನ:
ಕೃಷಿ, ಪೋಷಣೆ, ಆರೋಗ್ಯ ಮತ್ತು ಪರಿಸರ ಫಲಿತಾಂಶಗಳನ್ನು ಒಟ್ಟುಗೂಡಿಸುವುದು.
4. ಹವಾಮಾನ ಬದಲಾವಣೆ ನಿಯಂತ್ರಣ:
ಮೀಥೇನ್ನಂತಹ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವುದು.
5. ಜ್ಞಾನದ ಸಮ್ಮಿಲನ:
ಸಾಂಪ್ರದಾಯಿಕ ಪರಿಸರ ಜ್ಞಾನದೊಂದಿಗೆ ಆಧುನಿಕ ವಿಜ್ಞಾನವನ್ನು ಸಂಯೋಜಿಸುವುದು.
➤
ಸಾಂಸ್ಥಿಕ ಬೆಂಬಲ:
=> M.S. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ (MSSRF):
ಇದು ಈ ಯೋಜನೆಯ ನೋಡಲ್ ಸಂಶೋಧನಾ ಸಂಸ್ಥೆಯಾಗಿದೆ.
=> ಸಹಯೋಗ:
ಆರೋಗ್ಯ, ಪೋಷಣೆ ಮತ್ತು ಪರಿಸರ ಮಾಲಿನ್ಯದ ಅಧ್ಯಯನಕ್ಕಾಗಿ
IIT ಮದ್ರಾಸ್
ಮತ್ತು
ಶ್ರೀ ರಾಮಚಂದ್ರ ಸಂಸ್ಥೆ
ಯೊಂದಿಗೆ ಸಹಭಾಗಿತ್ವ ಹೊಂದಲಾಗಿದೆ.
➤
ಕೃಷಿ–ಜೀವವೈವಿಧ್ಯ (Agro-biodiversity) :
ವಿವಿಧ ಬೆಳೆಗಳು, ಪಶುಸಂಪತ್ತು ಹಾಗೂ ವೈವಿಧ್ಯಮಯ ಕೃಷಿ ವ್ಯವಸ್ಥೆಗಳ ಸಂಯೋಜನೆಯಾಗಿದ್ದು, ಇದು ಆಹಾರ ಭದ್ರತೆ, ಪೌಷ್ಟಿಕತೆ ಮತ್ತು ಹವಾಮಾನ ಬದಲಾವಣೆಗೆ ಎದುರಿಸುವ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ ಪ್ರಮುಖ ಸಂಸ್ಥಾತ್ಮಕ ಬೆಂಬಲವನ್ನು ನೀಡುತ್ತಿದ್ದು, ಈ ಉಪಕ್ರಮವು ಸ್ಥಿರ ಅಭಿವೃದ್ಧಿ ಗುರಿಗಳಾದ SDG–2 (ಶೂನ್ಯ ಹಸಿವು), SDG–3 (ಉತ್ತಮ ಆರೋಗ್ಯ), SDG–13 (ಹವಾಮಾನ ಕ್ರಮ) ಹಾಗೂ SDG–15 (ಭೂಮಿಯ ಮೇಲಿನ ಜೀವ ಸಂರಕ್ಷಣೆ)ಗಳೊಂದಿಗೆ ನೇರ ಹೊಂದಾಣಿಕೆಯನ್ನು ಹೊಂದಿದೆ.
➤
ಬಯೋ–ಹ್ಯಾಪಿ ಜಿಲ್ಲಾ ಮಾದರಿಯು ಭಾರತಕ್ಕೆ ವಿಶೇಷವಾದ, ಪರಿಸರ ಕೇಂದ್ರಿತ ಮತ್ತು ಜೀವವೈವಿಧ್ಯ ಸಮೃದ್ಧ ಬುಡಕಟ್ಟು ಪ್ರದೇಶಗಳಿಗೆ ಅತ್ಯಂತ ಸೂಕ್ತವಾದ, ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ದೃಷ್ಠಿಕೋನವನ್ನು ಪ್ರತಿನಿಧಿಸುತ್ತದೆ.
Take Quiz
Loading...