* ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 22 ರಂದು (ಸೋಮವಾರ) ಅರುಣಾಚಲ ಪ್ರದೇಶದಲ್ಲಿ 5,125.37 ಕೋ.ರೂ.ವೆಚ್ಚದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು.* ಇಂದಿರಾ ಗಾಂಧಿ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರು ಶಿಯೋಮಿ ಜಿಲ್ಲೆಯಲ್ಲಿ ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳು ಮತ್ತು ತವಾಂಗ್ ನಲ್ಲಿ ಸಮ್ಮೇಳನ ಸಭಾಂಗಣಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.* ಪ್ರಮುಖ ಜಲವಿದ್ಯುತ್ ಉದ್ಯಮಗಳು, ರಸ್ತೆ ನಿರ್ಮಾಣ, ಆರೋಗ್ಯ ಮತ್ತು ಅಗ್ನಿ ಸುರಕ್ಷತೆ ನವೀಕರಣಗಳು ಮತ್ತು ತವಾಂಗ್ನಲ್ಲಿ ಒಂದು ಸಮಾವೇಶ ಕೇಂದ್ರವು ಈ ಯೋಜನೆಗಳಲ್ಲಿ ಸೇರಿವೆ, ಇದು ಭಾರತದ ಬೆಳವಣಿಗೆಯ ಕಥೆಯಲ್ಲಿ, ವಿಶೇಷವಾಗಿ ಶುದ್ಧ ಇಂಧನ ವಲಯದಲ್ಲಿ ಅರುಣಾಚಲ ಪ್ರದೇಶದ ಪಾತ್ರವನ್ನು ಬಲಪಡಿಸುತ್ತದೆ.* 186 ಮೆಗಾವ್ಯಾಟ್ ಸಾಮರ್ಥ್ಯದ ಟಾಟೊ-ಐ ಯೋಜನೆಯನ್ನು ಅರುಣಾಚಲ ಪ್ರದೇಶ ಸರ್ಕಾರ ಮತ್ತು ಈಶಾನ್ಯ ವಿದ್ಯುತ್ ನಿಗಮ ಲಿಮಿಟೆಡ್ (NEEPCO) ಜಂಟಿಯಾಗಿ ₹1,750 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದು ವಾರ್ಷಿಕವಾಗಿ 802 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.* 240 ಮೆಗಾವ್ಯಾಟ್ ಸಾಮಥ್ಯದ ಹಿಯೊ ಯೋಜನೆಯನ್ನು 1,939 ಕೋ.ರೂ.ಗಳಲ್ಲಿ ರಾಜ್ಯ ಸರಕಾರ ಮತ್ತು ನೀಪ್ಕೊ ಜಂಟಿಯಾಗಿ ನಿರ್ಮಿಸಲಿದ್ದು,ಇದು ವಾರ್ಷಿಕ 1,000 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.* ರಸ್ತೆ ಸಂಪರ್ಕ, ಆರೋಗ್ಯ, ಅಗ್ನಿಶಾಮಕ ಇಲಾಖೆಗೆ ಸಂಬಂಧಿಸಿದಂತೆ ₹1,290 ಕೋಟಿಗೂ ಹೆಚ್ಚು ಮೌಲ್ಯದ ಹಲವು ಮೂಲಸೌಕರ್ಯ ಯೋಜನೆಗಳನ್ನು ಮೋದಿ ಅವರು ಉದ್ಘಾಟಿಸಿದ್ದಾರೆ.