* ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ಪ್ರದೇಶದಲ್ಲಿ ಅಳವಡಿಸಿದ ಕ್ಯಾಮೆರಾಗಳು ವಿರಳ ಜಾತಿಯ ‘ಪಲ್ಲಾಸ್ ಕ್ಯಾಟ್’ ಬೆಕ್ಕಿನ ಚಿತ್ರಗಳನ್ನು ಇದೇ ಮೊದಲ ಬಾರಿ ಸೆರೆಹಿಡಿದಿವೆ.* ಇದರೊಂದಿಗೆ ಹಿಮಾಲಯದಲ್ಲಿ 4,200 ಮೀಟರ್ಗಿಂತ ಹೆಚ್ಚಿನ ಎತ್ತರದಲ್ಲಿ ಆರು ವಿಧದ ಕಾಡು ಬೆಕ್ಕುಗಳ ಅಸ್ತಿತ್ವ ಪತ್ತೆಯಾಗಿದೆ.* ಇವುಗಳಲ್ಲಿ ಸ್ನೋ ಲೆಪರ್ಡ್, ಕ್ಲೌಡೆಡ್ ಲೆಪರ್ಡ್, ಲೆಪರ್ಡ್ ಕ್ಯಾಟ್, ಕಾಮನ್ ಲೆಪರ್ಡ್, ಮಾರ್ಬಲ್ಡ್ ಕ್ಯಾಟ್ ಹಾಗೂ ಈಗ ಪತ್ತೆಯಾದ ಪಲ್ಲಾಸ್ ಕ್ಯಾಟ್ ಸೇರಿವೆ.* ವಿಶ್ವ ವನ್ಯಜೀವಿ ಸಂಸ್ಥೆಯ ಭಾರತ ಘಟಕವು ತವಾಂಗ್ ಮತ್ತು ಪಶ್ಚಿಮ ಕಮೆಂಗ್ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದು, ಇದು ದೇಶದ ಮಹತ್ತರ ದಾಖಲಾಗುತ್ತಿದೆ.* ರಾಜ್ಯ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ನಡೆಯುತ್ತಿರುವ ‘ರಿವೈವಿಂಗ್ ಟ್ರಾನ್ಸ್–ಹಿಮಾಲಯನ್ ರೇಂಜ್ಲ್ಯಾಂಡ್ಸ್’ ಯೋಜನೆ ಅಡಿಯಲ್ಲಿ ಈ ಅಧ್ಯಯನ ಕೈಗೆತ್ತಿಕೊಳ್ಳಲಾಗಿದೆ.* 2024ರ ಸೆಪ್ಟೆಂಬರ್ನಲ್ಲಿ 83 ಸ್ಥಳಗಳಲ್ಲಿ 136 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು, ಇದರಿಂದ ಹೊಸ ದಾಖಲೆಗಳು ಹೊರಬಂದಿವೆ.