Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಚಂದಿರನ 'ಕರಾಳ' ಮುಖದ ಫೋಟೋ ಸೆರೆಹಿಡಿದ ಗಗನಯಾನಿಗಳು: ಐಫೋನ್ ಬಳಸಿ ಚಿತ್ರ ತೆಗೆದ ವಿಜ್ಞಾನಿಗಳು!
Authored by:
Akshata Halli
Date:
8 ಎಪ್ರಿಲ್ 2026
➤ ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಸುಮಾರು 54 ವರ್ಷಗಳ ಸುದೀರ್ಘ ವಿರಾಮದ ನಂತರ ನಾಸಾದ ಮಹತ್ವಾಕಾಂಕ್ಷೆಯ 'ಆರ್ಟೆಮಿಸ್-2' ಮಿಷನ್ನ ಓರಿಯನ್ ನೌಕೆಯು ಚಂದ್ರನ ಸುತ್ತ ಯಶಸ್ವಿಯಾಗಿ ಪರಿಭ್ರಮಣ ನಡೆಸುವ ಮೂಲಕ ಜಾಗತಿಕ ಗಮನ ಸೆಳೆದಿದೆ ಹಾಗೂ 1972ರ ಅಪೊಲೊ 13ರ ಐತಿಹಾಸಿಕ ದೂರದ ದಾಖಲೆಯನ್ನು ಅಳಿಸಿಹಾಕುವುದರ ಜೊತೆಗೆ ಭೂಮಿಗೆ ಕಾಣಿಸದ ಚಂದ್ರನ ಇನ್ನೊಂದು ಬದಿಯ ಅಪರೂಪದ ಚಿತ್ರಗಳನ್ನು ಸೆರೆಹಿಡಿದು ಹೊಸ ಇತಿಹಾಸ ಬರೆದಿದೆ.
➤
ಚಂದ್ರನ ಸುತ್ತ ಏಳು ಗಂಟೆಗಳ ಪಯಣ:
ನಾಲ್ವರು ಗಗನಯಾನಿಗಳನ್ನು ಹೊತ್ತ ಓರಿಯನ್ ಕೋಶವು ಚಂದ್ರನ ಸುತ್ತ ಸತತ ಏಳು ಗಂಟೆಗಳ ಕಾಲ ಪರಿಭ್ರಮಣ ನಡೆಸಿತು. ಈ ವೇಳೆ ಗಗನಯಾನಿಗಳು ಚಂದ್ರನ ಮೇಲ್ಮೈಯಲ್ಲಿರುವ ಕುಳಿಗಳು, ಹೊಳೆಯುವ ಶಿಖರಗಳು ಮತ್ತು ಹಿಮದ ಅಸ್ತಿತ್ವದ ಬಗ್ಗೆ ಮಹತ್ವದ ಮಾಹಿತಿಯನ್ನು ರವಾನಿಸಿದ್ದಾರೆ. ವಿಶೇಷವೆಂದರೆ, ಗಗನಯಾನಿಗಳು ಕೆಲವು ದೃಶ್ಯಗಳನ್ನು ಸೆರೆಹಿಡಿಯಲು ತಮ್ಮ
ಐಫೋನ್ಗಳನ್ನು
ಕೂಡ ಬಳಸಿದ್ದಾರೆ!
➤
ಹೊಸ ಕುಳಿಗಳಿಗೆ ನಾಮಕರಣ:
ಈ ಐತಿಹಾಸಿಕ ಕ್ಷಣದಲ್ಲಿ ಗಗನಯಾನಿಗಳು ಚಂದ್ರನ ಮೇಲಿನ ಎರಡು ಹೊಸ ಕುಳಿಗಳಿಗೆ ಹೆಸರಿಡಲು ಅನುಮತಿ ಕೋರಿದ್ದಾರೆ. ಈ ಪೈಕಿ ಒಂದು ಕುಳಿಗೆ ಕಮಾಂಡರ್ ರೀಡ್ ವೈಸ್ಮನ್ ಅವರ ದಿವಂಗತ ಪತ್ನಿಯ ಹೆಸರನ್ನು ಇಡಲು ನಿರ್ಧರಿಸಿರುವುದು ಇಡೀ ತಂಡವನ್ನು ಭಾವುಕರನ್ನಾಗಿಸಿತು.
➤ "ಚಂದ್ರನನ್ನು ಈಗ ಬರಿಗಣ್ಣಿನಲ್ಲಿ ನೋಡಬಹುದು, ಇದು ನಂಬಲಸಾಧ್ಯವಾದ ಅನುಭವ. ಈ ಪೀಳಿಗೆಯ ದಾಖಲೆಗಳನ್ನು ಮುಂದಿನ ಪೀಳಿಗೆ ಶೀಘ್ರದಲ್ಲೇ ಮುರಿಯಲಿ." —
ಜೆರೆಮಿ ಹ್ಯಾನ್ಸನ್, ಕೆನಡಾ ಗಗನಯಾನಿ.
Take Quiz
Loading...