* ತುಮಕೂರು ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಗಾಗಿ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದ 128 ಎಕರೆ ಅರಣ್ಯ ಬಳಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಷರತ್ತುಬದ್ಧ ಒಪ್ಪಿಗೆ ನೀಡಿದೆ.* ಮೂಕಾಂಬಿಕಾ ಮತ್ತು ಸೋಮೇಶ್ವರ ವನ್ಯಜೀವಿಧಾಮಗಳಲ್ಲಿ ‘ವಾರಾಹಿ ಪಂಪ್ಡ್ ಸ್ಟೋರೇಜ್’ ಯೋಜನೆಗಾಗಿ ಸರ್ವೆ ಮತ್ತು ಸ್ಥಳ ಪರಿಶೀಲನೆಗೆ ಅನುಮತಿ ನೀಡಲಾಗಿದೆ.* ಸಚಿವ ಭೂಪೇಂದರ್ ಯಾದವ್ ನೇತೃತ್ವದಲ್ಲಿ ನವದೆಹಲಿಯಲ್ಲಿ ಡಿಸೆಂಬರ್ 21ರಂದು ನಡೆದ ಸ್ಥಾಯಿ ಸಮಿತಿಯ 81ನೇ ಸಭೆಯಲ್ಲಿ ಕರ್ನಾಟಕ ಸರ್ಕಾರದ ಎರಡು ಪ್ರಮುಖ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿತು.* ಸ್ಥಾಯಿ ಸಮಿತಿಯ 79ನೇ ಸಭೆಯಲ್ಲಿ ಕಾಲುವೆ ಅಕ್ಕಪಕ್ಕದಲ್ಲಿ ಪ್ರಾಣಿಗಳ ಸಂಚಾರಕ್ಕೆ ಹಾದಿ ಹಾಗೂ ಹಾನಿ ಕಡಿಮೆಗೊಳಿಸಲು ಡೆಹ್ರಾಡೂನ್ ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ನ ತಜ್ಞರಿಂದ ಪರಿಶೀಲನೆ ನಡೆಸಲು ತೀರ್ಮಾನವಾಯಿತು.* ಪಾಶ್ಚಿಮಾತ್ಯ ದೇಶಗಳ ಮಾದರಿಗಳನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದು, ಅವು ನಮ್ಮ ಭೂಪ್ರದೇಶಕ್ಕೆ ಸೂಕ್ತವಲ್ಲವೆಂದು ಇನ್ಸ್ಟಿಟ್ಯೂಟ್ ಅಭಿಪ್ರಾಯ ನೀಡಿತು.* ಸ್ಥಾಯಿ ಸಮಿತಿಯ 80ನೇ ಸಭೆಯಲ್ಲಿ ಕಾಡುಪ್ರಾಣಿಗಳ ಸುಗಮ ಸಂಚಾರಕ್ಕೆ ಕಾಲುವೆಯ ಪ್ರತಿ 500 ಮೀಟರ್ನಲ್ಲಿ ಅಗಲವಾದ ಮೇಲು ರಸ್ತೆಗಳ ನಿರ್ಮಾಣ ಹಾಗೂ ಎಸ್ಕೇಪ್ ರ್ಯಾಂಪ್ಗಳನ್ನು ಸ್ಥಾಪಿಸುವ ಪ್ರಸ್ತಾವನೆಗೆ ಚರ್ಚೆ ನಡೆಯಿತು.* ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ನ ತಜ್ಞರು ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಹಾಗೆ ರಾಜ್ಯವು ತಜ್ಞರ ಶಿಫಾರಸುಗಳನ್ನು ಒಪ್ಪಿದೆ.* 10 ಷರತ್ತುಗಳನ್ನು ವಿಧಿಸಿ, ಸ್ಥಾಯಿ ಸಮಿತಿಯು ಕಾಡು ಬಳಕೆಗೆ ಒಪ್ಪಿಗೆ ನೀಡಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ ಎದುರಾಗಿದ್ದ ದೊಡ್ಡ ಅಡ್ಡಿಯು ನಿವಾರಣೆಯಾಗಿದೆ.