* ಸ್ವದೇಶಿ ನಿರ್ಮಿತ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ಗಳಿಗೆ (MBRL) ಹೆಚ್ಚುತ್ತಿರುವ ಜಾಗತಿಕ ಆಸಕ್ತಿ ಮತ್ತು ಬೇಡಿಕೆ ಹೆಚ್ಚಿದೆ. ಇದರ ಪರಿಣಾಮವಾಗಿ ಈ ಪಿನಾಕಾ ರಾಕೆಟ್ಗಳನ್ನು ಅರ್ಮೇನಿಯಾ ಖರೀದಿಸುತ್ತಿದೆ.* ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಈ ರಾಕೆಟ್ಗಳ ಪೂರೈಕೆಯು ಆಕಾಶ್ ಏರ್ ಡಿಫೆನ್ಸ್ ಕ್ಷಿಪಣಿ ವ್ಯವಸ್ಥೆಯ ಪೂರೈಕೆಯ ಸಂದರ್ಭದಲ್ಲಿ ಶುರುವಾಗಿದೆ.* ಅರ್ಮೇನಿಯಾಗೆ ಮೊದಲ ಹಂತದ ಪಿನಾಕಾ ರಾಕೆಟ್ಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. * ಪಿನಾಕಾ ರಾಕೆಟ್ಗಳ ದಾಳಿ ನಡೆಸುವ ಭಾರೀ ಸಾಮರ್ಥ್ಯವನ್ನು ಹೊಂದಿದ್ದು, 80 ಕಿ.ಮೀ. ದೂರದ ಗುರಿಯನ್ನು ತಲುಪುತ್ತವೆ. ಈ ರಾಕೆಟ್ಗೆ ಪೂರೈಕೆ ಸಂಬಂಧಿಸಿದಂತೆ ಭಾರತೀಯ ಕಂಪನಿಗಳು ಮತ್ತು ಅರ್ಮೇನಿಯಾ ಮಧ್ಯೆ 2 ವರ್ಷಗಳ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತು.* ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಭಾರತದ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಖರೀದಿದಾರರಲ್ಲಿ ಅರ್ಮೇನಿಯಾ ಮೂರನೇ ಅತಿದೊಡ್ಡ ಖರೀದಿದಾರ ದೇಶವಾಗಿದೆ.* ಇತ್ತೀಚೆಗೆ ಆಗ್ನೇಯ ಏಷ್ಯಾ ಮತ್ತು ಯುರೋಪ್ನ ಹಲವು ದೇಶಗಳು ಪಿನಾಕಾ ರಾಕೆಟ್ನಲ್ಲಿ ಆಸಕ್ತಿ ತೋರಿಸಿವೆ. ಇದರ ಹಲವು ಹೊಸ ರೂಪಾಂತರಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಭಾರತೀಯ ಸೇನೆಯು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಲು ಯೋಜಿಸುತ್ತಿದೆ.* ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (ಡಿಆರ್ಡಿಒ) ಇತ್ತೀಚೆಗೆ ಪಿನಾಕಾ ಮಾರ್ಗದರ್ಶಿ ರಾಕೆಟ್ ಅನ್ನು ಪರೀಕ್ಷಿಸಿದೆ.* ಪಿನಾಕಾ ರಾಕೆಟ್ ವ್ಯವಸ್ಥೆಗೆ ಹಿಂದೂ ದೇವರು ಶಿವ 'ಪಿನಾಕ' ದೈವಿಕ ಬಿಲ್ಲು ಹೆಸರಿಡಲಾಗಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾನ್ ಈ ವರ್ಷ ಫ್ರಾನ್ಸ್ಗೆ ಉನ್ನತ ಮಟ್ಟದ ಭೇಟಿ ನೀಡಿದಾಗ ಫ್ರಾನ್ಸ್ ಈ ಪಿನಾಕ ವ್ಯವಸ್ಥೆಯಲ್ಲಿ ಆಸಕ್ತಿ ತೋರಿಸಿದೆ.