* ‘ಸ್ಮಾರ್ಟ್ ಸಿಟಿ ಮಿಷನ್’ವು ಭಾರತದಲ್ಲಿ 100 ನಗರಗಳನ್ನು ಮೇಲ್ದರ್ಜೆಗೇರಿಸುವ ಗುರಿಯೊಂದಿಗೆ 2015ರ ಜೂನ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಾರಂಭಗೊಂಡಿತ್ತು.* ಈ ಮಿಷನ್ ಜೂನ್ನಲ್ಲಿ ಒಂದು ದಶಕವನ್ನು ಪೂರೈಸುತ್ತಿದೆ. ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್ ದೀಪ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.* ಇತ್ತೀಚೆಗೆ ಎಸ್ಬಿಐ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಒಟ್ಟು 1.64 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳಲ್ಲಿ ಶೇ.90ರಷ್ಟು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಪೈಕಿ ಶೇ.90ರಷ್ಟು ಎಂದರೆ 1.50 ಲಕ್ಷ ಕೋಟಿ ರೂ. ವೆಚ್ಚದ 7,504 ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ.* ಸ್ಮಾರ್ಟ್ ಸಿಟಿಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಶೇ.23ರಷ್ಟು ಸುಧಾರಣೆ ಕಂಡುಬಂದಿದೆ. ಈ ಯೋಜನೆಯ ಅಡಿಯಲ್ಲಿ ಅಪರಾಧ ಪ್ರಮಾಣವೂ ಶೇ.27ರಷ್ಟು ಇಳಿದಿದೆ.* ಖರ್ಚುಮಟ್ಟದ ಹಿರಿತನದ ಆಧಾರದ ಮೇಲೆ ಇಂದೋರ್ ಮೊದಲ ಸ್ಥಾನದಲ್ಲಿದ್ದು, ಶ್ರೀನಗರ ಎರಡನೇ ಸ್ಥಾನದಲ್ಲಿದೆ. ಟಾಪ್ 25 ನಗರಗಳು ಒಟ್ಟಾರೆ ಮೊತ್ತದ ಶೇ.40ರಷ್ಟು ಖರ್ಚು ಮಾಡಿವೆ.* ಸ್ಮಾರ್ಟ್ ಸಿಟಿ ಮಿಷನ್ನ ಮುಖ್ಯ ಉದ್ದೇಶ ನಗರಗಳ ಆರ್ಥಿಕ, ಸಾಮಾಜಿಕ, ಭೌತಿಕ ಮತ್ತು ಸಾಂಸ್ಥಿಕ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿಯ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದು.